ಬೆಂಗಳೂರು, ಜು 07 (DaijiworldNews/MS): ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಆಸ್ತಿ ಸಂಪಾದನೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದ್ದು ಆದಾಯಕ್ಕಿಂತ ಶೇ.2031ರಷ್ಟು ಹೆಚ್ಚು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಇಡಿ ಗೆ ಎಸಿಬಿ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ ಎನ್ನಲಾಗಿದೆ.
ಜಮೀರ್ ಅಹ್ಮದ್ ಮನೆ, ಕಚೇರಿ ಸೇರಿದಂತೆ 5 ಕಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ACB) ಹಠಾತ್ ದಾಳಿಯಲ್ಲಿ ಅಕ್ರಮ ಆಸ್ತಿ ಗಳಿಸಿದ್ದಾರೆ ಜಾರಿ ನಿರ್ದೇಶನಾಲಯ ತನ್ನ ವರದಿಯಲ್ಲಿ ತಿಳಿಸಿದೆ.
ಜಮೀರ್ 2005ರಿಂದ ಆಗಸ್ಟ್ 2021ರ ತನಕದ ಜಮೀರ್ ಆಸ್ತಿಯನ್ನು ಮೌಲ್ಯ ಮಾಪನ ಮಾಡಲಾಗಿದೆ. ಜಮೀರ್ ಖಾನ್ ಅವರ ಆಸ್ತಿ ಮೌಲ್ಯ 87, 44, 05 , 057 ರೂ ಆಗಿದ್ದು ಅದು ಅವರ ಆದಾಯ ಮೂಲದ 2,031 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.
ರೈಲ್ವೆ ನಿಲ್ದಾಣ ಸಮೀಪ ಬಂಬೂ ಬಜಾರ್ನಲ್ಲಿರುವ ಜಮೀರ್ ಅವರ ಮನೆ, ಸದಾಶಿವ ನಗರದಲ್ಲಿರುವ ಅತಿಥಿ ಗೃಹ, ಕಲಾಸಿಪಾಳ್ಯದಲ್ಲಿನ ನ್ಯಾಶನಲ್ ಟ್ರಾವೆಲ್ಸ್ ಕಂಪನಿಯ ಕಚೇರಿ, ಓಕಾ ಅಪಾರ್ಟ್ಮೆಂಟ್ ಫ್ಲ್ಯಾಟ್ ಹಾಗೂ ಬನಶಂಕರಿಯ ಜೆ.ಕೆ ಅಸೋಸಿಯೇಟ್ಸ್ ಕಚೇರಿ ಸೇರಿ ಐದು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ(ED) ನೀಡಿದ ವರದಿ ಮತ್ತು ದಾಖಲೆಗಳ ಆಧಾರದ ಮೇಲೆ 85 ಸಿಬ್ಬಂದಿಯನ್ನು ಒಳಗೊಂಡ ಎಸಿಬಿಯ ಐದು ತಂಡಗಳು ಶಾಸಕರ ನಾಲ್ಕು ಆಸ್ತಿಗಳ ಮೇಲೆ ದಾಳಿ ನಡೆಸಿತ್ತು.