ನವದೆಹಲಿ, ಜು 06 (DaijiworldNews/MS): ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಬುಧವಾರ ಹಠಾತ್ ಪ್ರವಾಹ ಉಂಟಾಗಿದ್ದು ಮೇಘಸ್ಫೋಟದಿಂದ ಧಾರಾಕಾರ ಮಳೆ ಸುರಿಯುತ್ತಿದೆ . ಹಠಾತ್ ಪ್ರವಾಹದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಲು ಜಿಲ್ಲೆಯ ಮಲಾನಾ ಮತ್ತು ಮಣಿಕರಣ್ ಪ್ರದೇಶಗಳು ಹೊರಗಿನ ಸಂಪರ್ಕ ಕಡಿದುಕೊಂಡಿದ್ದು, ಬೆಳಿಗ್ಗೆ 6 ಗಂಟೆ ಸುಮಾರಿಗೆ ಅವಘಡ ಉಂಟಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು ನಾಲ್ಕರಿಂದ ಆರು ಮಂದಿ ನಾಪತ್ತೆಯಾಗಿರಬಹುದು ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಮೊಖ್ತಾ ತಿಳಿಸಿದ್ದಾರೆ.
ಪಹಿಮಾಚಲ ಪ್ರದೇಶದಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆ ಮುಂದುವರಿದಿದೆ. ಪಾರ್ವತಿ ನದಿಗೆ ಅಡ್ಡಲಾಗಿರುವ ಸೇತುವೆಗೆ ಹಾನಿಯಾಗಿದ್ದು, ಧಲ್ಲಿ ಪ್ರದೇಶದ ಸುರಂಗದಲ್ಲಿ ಭೂಕುಸಿತವಾಗಿದೆ.