ನವದೆಹಲಿ, ಜು 06(DaijiworldNews/DB): ಗುಜರಾತ್ನ ಕಾಂಡ್ಲಾದಿಂದ ಮುಂಬೈಗೆ ಹೊರಟಿದ್ದ ಸ್ಪೈಸ್ಜೆಟ್ ಏರ್ಲೈನ್ ವಿಮಾನವು ಆಗಸದಲ್ಲಿ ಹಾರಾಡುತ್ತಿದ್ದಾಗಲೇ ವಿಂಡ್ಶೀಲ್ಡ್ನಲ್ಲಿ ಬಿರುಕು ಬಿಟ್ಟ ಘಟನೆ ಮಂಗಳವಾರ ನಡೆದಿದೆ. ತತ್ಕ್ಷಣವೇ ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಲಾಗಿದೆ.
ಸುಮಾರು 23,000 ಅಡಿ ಎತ್ತರದಲ್ಲಿ ವಿಮಾನವು ಹಾರಾಟ ನಡೆಸುತ್ತಿತ್ತು. ಈ ವೇಳೆ ವಿಮಾನದ ವಿಂಡ್ಶೀಲ್ಡ್ನಲ್ಲಿ ಬಿರುಕು ಬಿಟ್ಟಿರುವುದು ಸಿಬಂದಿ ಗಮನಕ್ಕೆ ಬಂದಿದೆ. ತತ್ಕ್ಷಣ ಸಿಬಂದಿ ಅಗತ್ಯ ಪರೀಕ್ಷೆಗಳನ್ನು ನಡೆಸಿ, ಮುಂಬೈನಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಲಾಗಿದೆ ಎಂದು ಸ್ಪೈಸ್ಜೆಟ್ ಸಂಸ್ಥೆ ತಿಳಿಸಿದೆ.
ಇದಕ್ಕೂ ಮೊದಲು ಸ್ಪೈಸ್ಜೆಟ್ನ ಇನ್ನೊಂದು ವಿಮಾನದಲ್ಲಿಯೂ ಅವಘಡ ಕಾಣಿಸಿಕೊಂಡಿತ್ತು. ದೆಹಲಿಯಿಂದ ದುಬೈಗೆ ಹೊರಟಿದ್ದ ವಿಮಾನದ ಇಂಧನ ಪೂರೈಕೆ ಟ್ಯಾಂಕ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂದಿತ್ತು. ಈ ವಿಮಾನದಲ್ಲಿ100 ಮಂದಿ ಪ್ರಯಾಣಿಕರಿದ್ದರು. ಆದರೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದುಸಂಸ್ಥೆಯ ವಕ್ತಾರರು ತಿಳಿಸಿರುವುದಾಗಿ ವರದಿಯಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶ ನಾಲಯವು(ಡಿಜಿಸಿಐ) ಪ್ರಕರಣದ ತನಿಖೆ ನಡೆಸುತ್ತಿದೆ.
ಕಳೆದ17 ದಿನಗಳ ಅವಧಿಯಲ್ಲಿ ಸ್ಪೈಸ್ ಜೆಟ್ನ 7 ವಿಮಾನಗಳು ತಾಂತ್ರಿಕ ತೊಂದರೆಯನ್ನು ಅನುಭವಿಸಿವೆ.