ಜೈಪುರ, ಜು 06 (DaijiworldNews/MS): ಬಿಜೆಪಿಯಿಂದ ಅಮಾನತುಗೊಂಡಿದ್ದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿದರೆ ಅಂಥವರಿಗೆ ತನ್ನ ಮನೆಯನ್ನು ಉಡುಗೊರೆ ನೀಡುವುದಾಗಿ ಹೇಳಿಕೆ ನೀಡಿದ್ದ ರಾಜಸ್ಥಾನದ ಅಜ್ಮೀರ್ ದರ್ಗಾದ ಮೌಲ್ವಿ ಸಲ್ಮಾನ್ ಚಿಸ್ತಿ ಇಂದು ಬಂಧಿಸಲಾಗಿದೆ.
ಶಿರಚ್ಛೇದ ಮಾಡಿದವರಿಗೆ ತನ್ನ ಮನೆಯನ್ನು ಉಡುಗೊರೆಯಾಗಿ ನೀಡುವುದಾಗಿ ಆಫರ್ ನೀಡಿದ ಆರೋಪದ ಮೇಲೆ ಮೌಲ್ವಿ ಸಲ್ಮಾನ್ ಚಿಸ್ತಿಯನ್ನು ಬಂಧಿಸಲಾಗಿದೆ. ಈ ಆರೋಪಿಯು ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿ ದಲ್ವೀರ್ ಸಿಂಗ್ ಫೌಜ್ದಾರ್ ಹೇಳಿದ್ದಾರೆ.
ಈ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವಿಡಿಯೋದಲ್ಲಿ ನೂಪುರ್ ಶಿರಚ್ಛೇದ ಮಾಡಿದವರಿಗೆ ತನ್ನ ಮನೆಯನ್ನು ಉಡುಗೊರೆ ನೀಡುತ್ತೇನೆ ಹಾಗೂ ಇದರೊಂದಿಗೆ ಪ್ರವಾದಿಯನ್ನು ಅವಹೇಳನ ಮಾಡಿದ್ದಕ್ಕಾಗಿ ಆಕೆಯನ್ನು ಗುಂಡಿಟ್ಟು ಸಾಯಿಸುತ್ತೇನೆ. ಈ ಸಂದೇಶವು ಹುಜೂರ್ ಖ್ವಾಜಾ ಬಾಬಾ ಕಾ ದರ್ಬಾರ್ನಿಂದ ಬಂದಿದೆ ಎಂದು ಹೇಳಿದ್ದ.
ಆದರೆ ಅಜ್ಮೀರ್ ದರ್ಗಾದ ದಿವಾನ್ ಝೈನುಲ್ ಅಬೇದಿನ್ ಅಲಿ ಖಾನ್ ಅವರ ಕಚೇರಿ ಈ ವಿಡಿಯೋವನ್ನು ಖಂಡಿಸಿ, ಈ ಸ್ಥಳ ಕೋಮು ಸೌಹಾರ್ದತೆಯ ಸ್ಥಳವಾಗಿದೆ ಎಂದು ಹೇಳಿತ್ತು. ವಿಡಿಯೊದಲ್ಲಿ ಖದೀಮ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ದರ್ಗಾದ ಸಂದೇಶವೆಂದು ಪರಿಗಣಿಸಲಾಗುವುದಿಲ್ಲ ಎಂದು ಅದು ಹೇಳಿತ್ತು.
ಈ ಟೀಕೆಗಳು ಒಬ್ಬ ವ್ಯಕ್ತಿಯ ಹೇಳಿಕೆಯಾಗಿದ್ದು, ಇದು ಅತ್ಯಂತ ಖಂಡನೀಯವಾಗಿದೆ ಎಂದು್ ಪ್ರತಿಕ್ರಿಯಿಸಿತ್ತು.