ಹುಬ್ಬಳ್ಳಿ,ಜು 05 (DaijiworldNews/HR): ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರೂಜಿಯವ ಆಪ್ತ ಮಹಾಂತೇಶ್ ಶಿರೂರ ಅವರ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗುರೂಜಿ ಹತ್ಯೆಯ ಹಿಂದೆ ಅವರ ಆಪ್ತ ಮಹಾಂತೇಶ್ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಹುಬ್ಬಳ್ಳಿಯ ಪೊಲೀಸರು ಗುರೂಜಿ ಆಪ್ತ ಮಹಾಂತೇಶ್ ಶಿರೂರ ಅವರ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಇಂದು ಮಧ್ಯಾಹ್ನ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆಗೈದಿದ್ದರು.