ಚಿಕ್ಕಮಗಳೂರು, ಜು 05 (DaijiworldNews/HR): ಚಿಕ್ಕಮಗಳೂರಿನ ಹೊಸಪೇಟೆಯಲ್ಲಿ ಸುರಿದ ಮಳೆಗೆ ಶಾಲೆ ಮುಗಿಸಿ ಸಂಜೆ ಮನೆಗೆ ಹೋಗುವಾಗ ಕಂಬಿಹಳ್ಳಿ ಸಮೀಪ ಕಾಫಿ ಎಸ್ಟೇಟ್ ನೊಳಗಿನ ಹಳ್ಳದಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಸುಪ್ರಿತಾ ಕೊಚ್ಚಿ ಹೋಗಿದ್ದ ಘಟನೆ ನಡೇದಿದ್ದು, ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ತೀವ್ರ ಶೋಧ ಕಾರ್ಯ ಮುಂದುವರಿದೆ.
ಬಾಲಕಿಯ ಮೃತದೇಹಕ್ಕಾಗಿ ಸೋಮವಾರ ಸಂಜೆಯಿಂದಲೇ ಹಲವು ವಿಧಾನಗಳ ಮೂಲಕ ಶೋಧಕಾರ್ಯಾಚರಣೆ ನಡೆಸಿದ್ರೂ ಬಾಲಕಿಯ ಶವ ಇನ್ನೂ ಪತ್ತೆಯಾಗಿಲ್ಲ.
ಇನ್ನು ನಿನ್ನೆ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುವ ಸಂದರ್ಭದಲ್ಲಿ ಮಳೆಗೆ ಕೊಡೆ ಕೊಚ್ಚಿ ಹೋಯ್ತು ಎಂಬ ಕಾರಣಕ್ಕೆ ಹಿಡಿಯಲು ಹೋದಾಗ ಬಾಲಕಿ ಕೊಚ್ಚಿ ಹೋಗಿದ್ದಾಳೆ ಎಂಬ ತಿಳಿದು ಬಂದಿದೆ.