ಹುಬ್ಬಳ್ಳಿ, ಜು 05 (DaijiworldNews/HR): ಯಾರೂ ಕೂಡ ನನ್ನ ಮಗನಿಗೆ ಸಾಲ ಕೊಡಬೇಡಿ. ದುಶ್ಚಟಕ್ಕೆ ಬಲಿಯಾಗಿ ತನ್ನ ಎಲ್ಲ ಆಸ್ತಿಯನ್ನೂ ಹಾಳು ಮಾಡಿಕೊಂಡಿದ್ದಾನೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ್ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದಾರೆ.
ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ಈ ಪ್ರಕಟಣೆ ಹೊರಡಿಸಿದ್ದು, ನನ್ನ ಮಗನೇ ನನ್ನ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅವನಿಗೆ ಯಾರೂ ಸಾಲ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಇನ್ನು ಪದವೀಧರನಾಗಿರುವ ನನ್ನ ಮಗ ಬಾಪೂಗೌಡ ಪಾಟೀಲ್ ಐದಾರು ವರ್ಷಗಳಿಂದ ದುಶ್ಚಟಕ್ಕೆ ಬಿದ್ದಿದ್ದು, ಕೋಟಿಗಟ್ಟಲೇ ಸಾಲ ಮಾಡಿ, ಸಾಲ ತೀರಿಸಲು ಅವನ ಹೆಸರಿನಲ್ಲಿದ್ದ ಆಸ್ತಿಯನ್ನೂ ಮಾರಿದ್ದಾನೆ ಎಂದು ಹೇಳಿದ್ದಾರೆ.