ಬೆಂಗಳೂರು, ಜು 05(DaijiworldNews/MS): ಐಎಂಎ ವಂಚನೆ ಪ್ರಕರಣ ಸಂಬಂಧ ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲೆ ಭ್ರಷ್ಟಾಚಾರ ನಿಗ್ರದ ದಳ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗ್ಗೆ ಮೂರ್ನಾಲ್ಕು ಜೀಪ್ ಗಳಲ್ಲಿ ಬಂದಿರೋ ಎಸಿಬಿ ತಂಡದಿಂದ ದಾಳಿ ನಡೆದ್ದು, ಬೆಂಗಳೂರಿನ ಬಂಬೂ ಬಜಾರ್ ನಲ್ಲಿರೋ ಅಹಮದ್ ಖಾನ್ ರವರ ಮನೆ ಸೇರಿ, ಕಲಾಸಿಪಾಳ್ಯದಲ್ಲಿ ಇರುವ ನ್ಯಾಷನಲ್ ಟ್ರಾವೆಲ್ಸ್ ಆಫೀಸ್ , ಸಿಲ್ವರ್ ಓಕ್ ವಸತಿ ಸಮುಚ್ಚಯದಲ್ಲಿರುವ ಫ್ಲಾಟ್, ಸದಾಶಿವನಗರದಲ್ಲಿರುವ ಗೆಸ್ಟ್ಹೌಸ್ ಮತ್ತು ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ ಮೇಲೆ 40 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆಯನ್ನು ಆರಂಭಿಸಿದ್ದಾರೆ.
ಎಸ್ ಪಿ ಯತೀಶ್ ಚಂದ್ರ ಅವರ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ದಾಳಿ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿಯೇ ಇದ್ದರು ಎಂಬ ಮಾಹಿತಿಲಭ್ಯವಾಗಿದ್ದು, ಶಾಸಕ ಜಮೀರ್ ಅಹ್ಮದ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಹಾಗೂ ಅವರ ನಿವಾಸದ ಮುಂದೆ ಸ್ಥಳೀಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.