ಮಧ್ಯಪ್ರದೇಶ, ಜು 04 (DaijiworldNews/HR): ಮಧ್ಯಪ್ರದೇಶದ ಉಜ್ಜಯಿನಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಆಕೆಯ ಮನೆಯಲ್ಲಿಯೇ ಅತ್ಯಾಚಾರವೆಸಗಿ ಬಳಿಕ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಂತ್ರಸ್ತ ಬಾಲಕಿಯು ತನ್ನ ಅಜ್ಜಿಯೊಂದಿಗೆ ಉಜ್ಜಯಿನಿಯಲ್ಲಿ ವಾಸಿಸುತ್ತಿದ್ದು,ಶನಿವಾರ ಸಂಜೆ ಮನೆಯವರು ಬಾಲಕಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು.
ಇನ್ನು ಆಕೆಯ ಶವ ಭಾನುವಾರದಂದು ಮನೆಯ ಮೊದಲ ಮಹಡಿಯಲ್ಲಿ ಧಾನ್ಯದ ಚೀಲಗಳ ರಾಶಿಯ ನಡುವೆ ಬಿದ್ದಿರುವುದು ಕಂಡುಬಂದಿದೆ.
ಸಂತ್ರಸ್ತ ಬಾಲಕಿಯ ಕುತ್ತಿಗೆ ಸೇರಿದಂತೆ ದೇಹದ ಹಲವು ಗಾಯದ ಗುರುತುಗಳಿದ್ದು, ಇದು ಆಕೆಯ ಮೇಲೆ ಅತ್ಯಾಚಾರವೆಸಗಿರುವುದನ್ನು ಸೂಚಿಸುತ್ತದೆ ಎಂದು ವಿಧಿವಿಜ್ಞಾನ ಅಧಿಕಾರಿ ಪ್ರೀತಿ ಗೇಕ್ವಾಡ್ ಹೇಳಿದ್ದಾರೆ.