ಮುಂಬೈ, ಜು 04 (DaijiworldNews/MS): ವಾರದ ಹಿಂದೆಯಷ್ಟೇ ಉದ್ಧವ್ ಠಾಕ್ರೆ ಅವರ ಪರ ಕಣ್ಣೀರಿಟ್ಟು , ಗೋಳಾಡಿದ್ದ ಶಾಸಕರೊಬ್ಬರು , ಇಂದು ಠಾಕ್ರೆ ಟೀಂಗೆ ಕೈಕೊಟ್ಟು ಶಿಂಧೆ ಬಣದಲ್ಲಿ ಕಾಣಿಸಿಕೊಂಡ ಸ್ವಾರಸ್ಯಕರ ಘಟನೆ ಸದನದಲ್ಲಿ ವಿಶ್ವಾಸಮತ ಯಾಚನೆ ಸಂದರ್ಭ ನಡೆದಿದೆ.
ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ವಿರುದ್ದ ಬಂಡಾಯವೆದ್ದ ಶಾಸಕರ ತಂಡ ರಾಜಕೀಯ ಕೋಲಾಹಲಕ್ಕೆ ಕಾರಣವಾದಾಗ, ವಾರದ ಹಿಂದೆಯಷ್ಟೇ ಶಿವಸೇನಾ ಮುಖ್ಯಸ್ಥ, ಅಂದು ಮಹಾ ಸಿಎಂ ಆಗಿದ್ದ ಉದ್ಧವ್ ಠಾಕ್ರೆ ಅವರ ಪರ ಶಾಸಕ ಸಂತೋಷ್ ಬಂಗಾರ್ ಕಣ್ಣೀರಿಟ್ಟು , ಗೋಳಾಡಿ ತಮ್ಮ ಕ್ಷೇತ್ರದ ಜನರನ್ನು ಉದ್ದೇಶಿಸಿ ಕೈಮುಗಿದು ಅಳುತ್ತಾ ಎಂದಿದ್ದರು. ಜೂನ್ 24 ರಂದು ಕಣ್ಣೀರಿಟ್ಟ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಆದರೆ ಇಂದು ಪಕ್ಷಾಂತರಿಯಾಗಿ ಬಂಡಾಯ ನಾಯಕ ಏಕನಾಥ್ ಶಿಂಧೆ ಪರ ಮತ ಚಲಾಯಿಸಿದ್ದರು.
ವೀಡಿಯೊದಲ್ಲಿ ಶಾಸಕ ಬಂಗಾರ್ ಅವರು ಠಾಕ್ರೆ ಅವರಿಗೆ ಮಾಡಿದ "ದ್ರೋಹ" ಎಂದು ಹೇಳಿ ಕಣ್ಣೀರಿಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೆ ಮರಳಿ ಬರುವಂತೆ ಏಕನಾಥ್ ಶಿಂಧೆ ಅವರಿಗೆ ಮನವಿ ಮಾಡುವುದು, ಕಣ್ಣೀರಿಡುವಾಗ ಪಕ್ಕದಲ್ಲಿದ್ದ ಓರ್ವ ಬೆಂಬಲಿಗ ಕರವಸ್ತ್ರದಿಂದ ಅವನ ಕೆನ್ನೆಯನ್ನು ಒರೆಸುವ ದೃಶ್ಯ ವೀಡಿಯೊ ದಾಖಲಾಗಿದೆ. "ಬಾಳಾಸಾಹೇಬ್ ಠಾಕ್ರೆ, ಉದ್ಧವ್-ಜಿ ಠಾಕ್ರೆ ನೀವು ಮುಂದಡಿ ಇಡು ನಾವು ನಿಮ್ಮೊಂದಿಗಿದ್ದೇವೆ ಎಂದು ಶಾಸಕರು ಘೋಷಣೆ ಕೂಗಿದ್ದರು. ಈ ವೇಳೆ ಪ್ರೇಕ್ಷಕರಿಂದ ಚಪ್ಪಾಳೆ ಮತ್ತು ಹರ್ಷೋದ್ಗಾರ ಕೇಳಿಬಂದಿತ್ತು.
ನಿನ್ನೆ ತಡರಾತ್ರಿ ಸಂತೋಷ್ ಬಂಗಾರ್ ಅವರು ಹೊಸ ಮುಖ್ಯಮಂತ್ರಿ ತಂಗಿರುವ ಮುಂಬೈನ ಹೋಟೆಲ್ಗೆ ತಮ್ಮ ಬೆಂಬಲಿತ ಶಾಸಕರೊಂದಿಗೆ ತೆರಳಿಅಧಿಕೃತವಾಗಿ ಪ್ರತಿಸ್ಪರ್ಧಿ ಪಾಳೆಯಕ್ಕೆ ಪಕ್ಷಾಂತರಗೊಂಡಿದ್ದರು.
ಇಂದು ಬೆಳಿಗ್ಗೆ, ಏಕನಾಥ್ ಶಿಂಧೆ ಅವರೊಂದಿಗೆ ಮತ ಚಲಾಯಿಸಿದಾಗ ಬಂಗಾರ್ ಅವರನ್ನು ಪ್ರತಿಪಕ್ಷದ ಸದಸ್ಯರು ಅಣಕಿಸಿದರು .