ಬೆಂಗಳೂರು, ಜು 04 (DaijiworldNews/MS): ಜಮ್ಮು ಕಾಶ್ಮೀರದಲ್ಲಿ ಸೆರೆಯಾದ ಮೋಸ್ಟ್ ವಾಟೆಂಡ್ ಉಗ್ರರಿಗೆ ಬಿಜೆಪಿ ನಂಟು ಇರುವುದು ಬಹಿರಂಗವಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ಘಟಕವು, ಬಿಜೆಪಿ ವಿರುದ್ದ ಮುಗಿಬಿದ್ದಿದ್ದು "ಭಾರತೀಯ ಟೆರರಿಸ್ಟ್ ಪಾರ್ಟಿ"ಯ ಒಂದೊಂದೇ ಕರಾಳ ಮುಖಗಳು ಹೊರಬರುತ್ತಿದ್ದು ದೇಶದಲ್ಲಿ ಯಾವುದೇ ವಿಧ್ವಂಸಕಾರಿ ಶಕ್ತಿಗಳ ಮೂಲ ಕೆದಕಿದಾಗ ಅಲ್ಲಿ ಬಿಜೆಪಿ, ಆರೆಸ್ಸೆಸ್ಸ್ ನ ನಂಟು ಇರುತ್ತದೆ ಎಂದು ಕಿಡಿಕಾರಿದೆ.
ಜಮ್ಮು ಕಾಶ್ಮೀರದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಸ್ಥಳೀಯರೇ ಲಷಕ್ ಎ ತಯ್ಯಬಾ ಸಂಘಟನೆಯ ಕಮಾಂಡರ್ ತಾಲಿಬ್ ಹುಸೇನ್ ಮತ್ತು ಫೈಜಲ್ ಅಹ್ಮದ್ ಎಂಬ ಇಬ್ಬರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಸೆರೆಯಾಗಿದ್ದ ತಾಲಿಬ್ ಹುಸೇನ್ ರಜೌರಿಯಲ್ಲಿ ಮೂರು ಸ್ಪೋಟಗಳನ್ನು ನಡೆಸಿದ್ದ. ಮಾತ್ರವಲ್ಲದೆ ನಾಗರಿಕ ಹತ್ಯೆ, ಗೆನೇಡ್ ಸ್ಪೋಟದಲ್ಲೂ ಭಾಗಿಯಾಗಿದ್ದ. ಬಿಜೆಪಿ ಐಟಿ ಸೆಲ್ ನ ಮಾಜಿ ಅಧ್ಯಕ್ಷನಾಗಿದ್ದ. 2018 ರಲ್ಲಿ ಈತನ ಪ್ರೋಫೈಲ್ ಪೋಟೋ 'ಐ ಲವ್ ನಮೋ' ಎಂದು ಆಗಿತ್ತು.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದ್ದು, " ಭಾರತೀಯ ಟೆರರಿಸ್ಟ್ ಪಾರ್ಟಿ"ಯ ಒಂದೊಂದೇ ಕರಾಳ ಮುಖಗಳು ಹೊರಬರುತ್ತಿವೆ. ದೇಶದ ಯಾವುದೇ ವಿಧ್ವಂಸಕಾರಿ ಶಕ್ತಿಗಳ ಮೂಲ ಕೆದಕಿದಾಗ ಅಲ್ಲಿ ಬಿಜೆಪಿ, RSSನ ನಂಟು ಇರುತ್ತದೆ.ಉದಯಪುರದ ಹಂತಕರು, ಕಾಶ್ಮೀರದ ಉಗ್ರರು ಬಿಜೆಪಿಯ ಸದಸ್ಯರೇ ಆಗಿದ್ದಾರೆ.ಪುಲ್ವಾಮ ದಾಳಿಯ ತನಿಖೆಯನ್ನು ಹಳ್ಳ ಹಿಡಿಸಿದ್ದು ಏಕೆ ಎಂದು ಜನತೆ ಈಗ ಸ್ಪಷ್ಟತೆಗೆ ಬರಬಹುದು" ಎಂದು ಆರೋಪಿಸಿದೆ.