ರಿಯಾಸಿ, ಜು 04 (DaijiworldNews/HR): ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಇಬ್ಬರು ಶಸ್ತ್ರ ಸಜ್ಜಿತ ಉಗ್ರರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಅದರಲೊಬ್ಬನ ಹಿನ್ನೆಲೆ ನೋಡಿ ಪೊಲೀಸರು ಶಾಕ್ ಆಗಿದ್ದಾರೆ.
ರಜೌರಿಯ ನಿವಾಸಿಯಾಗಿದ್ದ ಎಲ್ಇಟಿ ಕಮಾಂಡರ್ ತಾಲಿಬ್ ಹುಸೇನ್ ಮತ್ತು ಫೈಜಲ್ ಅಹ್ಮದ್ ಬಂಧಿತ ಉಗ್ರನಾಗಿದ್ದು, ಅವರಿಂದ ಎಕೆ ಅಸಾಲ್ಟ್ ರೈಫಲ್ಸ್, 7 ಗ್ರೆನೇಡ್ಗಳು, ಒಂದು ಪಿಸ್ತೂಲ್ ಅನ್ನು ವಶಕ್ಕೆ ಪಡೆಯಲಾಗಿತ್ತು.
ಇನ್ನು ಈ ಉಗ್ರರ ಬಾಯಿ ಬಿಡಿಸಿದ ಪೊಲೀಸರಿಗೆ ಶಾಕಿಂಗ್ ಸತ್ಯವೊಂದು ಗೊತ್ತಾಗಿದ್ದು, ಈ ಇಬ್ಬರು ಉಗ್ರರ ಪೈಕಿ ತಾಲಿಬ್ ಹುಸೇನ್ ಕೆಲ ದಿನಗಳವರೆಗೂ ಬಿಜೆಪಿ ನಾಯಕರಾಗಿದ್ದ ಮತ್ತು ಜಮ್ಮು ಪ್ರಾಂತ್ಯದ ಅಲ್ಪಸಂಖ್ಯಾತ ಮೋರ್ಚಾ ಐಟಿ ಸೆಲ್ ನಿರ್ವಹಿಸುತ್ತಿದ್ದ ಎಂಬುದು ತಿಳಿದಿದೆ.
ತಾಲಿಬ್ ಹುಸೇನ್ ಆನ್ಲೈನ್ ಸದಸ್ಯತ್ವದ ಮೂಲಕ ಬಿಜೆಪಿ ಸೇರಿಕೊಂಡಿದ್ದು, ಈತ ಬಿಜೆಪಿ ನಾಯಕರನ್ನು ಕೊಲ್ಲುವ ಸಂಚು ರೂಪಿಸಿದ್ದನೇ ಎನ್ನುವ ಸಂಶಯ ಪೊಲೀಸರಿಗೆ ಬಂದಿದೆ ಎನ್ನಲಾಗಿದೆ,
ಇನ್ನು ಬಿಜೆಪಿ ಕಳೆದ ಮೇ 9 ರಂದು ಜಮ್ಮು ಪ್ರಾಂತ್ಯದ ಪಕ್ಷದ ಐಟಿ ಮತ್ತು ಸಾಮಾಜಿಕ ಮಾಧ್ಯಮದ ಉಸ್ತುವಾರಿಯಾಗಿ ಹುಸೇನ್ ಶಾನನ್ನು ನೇಮಿಸಿತ್ತು ಎಂದು ವರದಿ ತಿಳಿಸಿದೆ.