ಸಿಲ್ಚಾರ್, ಜು 03 (DaijiworldNews/HR): ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವಿವಿಧ ಪ್ರಕರಣಗಳ ಇಬ್ಬರು ಆರೋಪಿಗಳು, ಪೊಲೀಸ್ ಗುಂಡೇಟಿಗೆ ಮೃತಪಟ್ಟಿರುವ ಘಟನೆ ಅಸ್ಸಾಂನ ಕಾಚಾರ್ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಜೊರಾಬತ್ ಪ್ರದೇಶದಲ್ಲಿ ವಾಹನವೊಂದರಲ್ಲಿ ಹಲವು ಪ್ರಕರಣಗಳ ಅಪರಾಧಿ ಸೇರಿದಂತೆ ಇತರ ಇಬ್ಬರನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದರು.
ಇನ್ನು ಶನಿವಾರ ರಾತ್ರಿ ಪೊಲೀಸರು ಈ ಮೂವರನ್ನು ವಾಹನದಲ್ಲಿ ಸಿಲ್ಚಾರ್ಗೆ ಕರೆತರುತ್ತಿದ್ದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ಬಳಿಕ ಪೊಲೀಸ್ ಗುಂಡಿನ ದಾಳಿ ನಡೆಸಿದೆ.