ಅಯೋಧ್ಯೆ, ಜು 03 (DaijiworldNews/DB): ಅಯೋಧ್ಯೆಯ ಭೂಪುರ್ ಗ್ರಾಮದಲ್ಲಿ ಹನುಮಾನ್ ದೇವಳ ಆವರಣದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.
ಮೃತ ಯುವಕ ಅಮೇಥಿ ಮೂಲದವನು ಎನ್ನಲಾಗಿದೆ. ಈತ ಪ್ರತಿದಿನ ದೇವಸ್ಥಾನದಲ್ಲೇ ಮಲಗುತ್ತಿದ್ದು, ಘಟನೆ ನಡೆದ ದಿನವೂ ಅಲ್ಲೇ ಮಲಗಿ ನಿದ್ರಿಸಿದ್ದ. ಆದರೆ ಘಟನೆಗೆ ಕಾರಣ ಯಾರೆನ್ನುವುದು ಪತ್ತೆಯಾಗಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ.
ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಮಿಲಕ್ಪುರ ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ಸತ್ಯೇಂದ್ರ ಭೂಷಣ್ ತಿಳಿಸಿದ್ದಾರೆ.