ಪ್ರಯಾಗ್ರಾಜ್, ಜು 03 (DaijiworldNews/HR): ವೈದ್ಯರೊಬ್ಬರು ಮೃತಪಟ್ಟು 13 ದಿನ ಕಳೆದ ಬಳಿಕ ಅವರಿಗೆ ವರ್ಗಾವಣೆ ಪತ್ರ ಬಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ದೀಪೇಂದ್ರ ಸಿಂಗ್ (55) ಅವರು ಯಕೃತ್ ಸಮಸ್ಯೆಯಿಂದ ಜೂನ್ 17ರಂದು ಮೃತಪಟ್ಟಿದ್ದರು
ಇನ್ನು ಜೂನ್ 30ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ್ದ ವರ್ಗಾವಣೆ ಪಟ್ಟಿಯಲ್ಲಿ ದೀಪೇಂದ್ರ ಸಿಂಗ್ ಹೆಸರಿದ್ದು, ಅದಾಗಲೇ ಅವರು ಮೃತಪಟ್ಟು 13 ದಿನ ಕಳೆದಿದ್ದು, ಈ ಸುದ್ದಿ ಈಗ ವೈರಲ್ ಆಗಿದೆ.
ವೈದ್ಯ ದೀಪೇಂದ್ರ ಸಿಂಗ್ ಅವರು ಸ್ತ್ರೀರೋಗ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.