ಗೋಧ್ರಾ(ಗುಜರಾತ್), ಜು 03 (DaijiworldNews/DB): 2002ರಲ್ಲಿ ಇಡೀ ಗುಜರಾತ್ನ್ನೇ ನಡುಗಿಸಿದ ಗೋಧ್ರಾ ಹತ್ಯಾಕಾಂಡ ಘಟನೆಯ ಆರೋಪಿಗೆ ಗೋದ್ರಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರೋಪಿ ರಫೀಕ್ ಹುಸೇನ್ ಬಟುಕ್ಗೆ ಗುಜರಾತ್ನ ಪಂಚಮಹಲ್ ಜಿಲ್ಲೆಯ ಗೋಧ್ರಾದಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2021ರ ಫೆಬ್ರವರಿಯಲ್ಲಿ ಈತನನ್ನು ಬಂಧಿಸಲಾಗಿತ್ತು.
2002ರ ಫೆಬ್ರವರಿ 27 ಗುಜರಾತ್ ಇತಿಹಾಸದಲ್ಲಿಯೇ ನಡೆದ ಅತಿ ಭೀಕರ ಘಟನೆ ಇದಾಗಿತ್ತು. ಅಯೋಧ್ಯಿಂದ ಹಿಂತಿರುಗುತ್ತಿದ್ದ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಿ 59 ಮಂದಿಯನ್ನು ಹತ್ಯೆ ಮಾಡಿದ ಆರೋಪ ಈತನ ಮೇಲಿತ್ತು. ಇದೀಗ ಆರೋಪ ಸಾಬೀತಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದೆ. ಪ್ರಕರಣದಲ್ಲಿ ಈವರೆಗೆ ತಪ್ಪಿತಸ್ಥರೆಂದು ಪರಿಗಣಿಸಲ್ಪಟ್ಟ 35ನೇ ಆರೋಪಿ ಬಟುಕ್ ಆಗಿದ್ದಾನೆ ಎಂಬುದಾಗಿ ವಿಶೇಷ ಸರ್ಕಾರಿ ಅಭಿಯೋಜಕ ಆರ್ಸಿ ಕೊಡೇಕರ್ ಮಾಹಿತಿ ನೀಡಿದ್ದಾರೆ ಎಂಬುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.