ರಾಮನಗರ, ಜು 03 (DaijiworldNews/DB): ರಾಜಣ್ಣ ದೇವೇಗೌಡರ ಕಾಲಿನ ದೂಳಿಗೂ ಸಮವಲ್ಲ. ಆಚಾರವಿಲ್ಲದ ನಾಲಿಗೆಯಿಂದ ಹೊರ ಬಂದ ಮಾತುಗಳು ಸತ್ಯವಾಗುವುದಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ರಾಜಣ್ಣ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮುಷ್ಕರ ನಿರತ ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಭೇಟಿ ಮಾಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಣ್ಣನವರ ನೀಚ ಬುದ್ದಿಯೇ ಮಧುಗಿರಿಯಲ್ಲಿ ಅವರ ಸೋಲಿಗೆ ಕಾರಣ ಎಂದರು.
ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೋರದಿರುವ ಅವರು ದೇವೇಗೌಡರನ್ನು ಭೇಟಿಯಾಗುವುದಾಗಿ ಹೇಳುತ್ತಿದ್ದಾರೆ. ಆದರೆ ಇಂತಹ ವ್ಯಕ್ತಿಯನ್ನು ಭೇಟಿಯಾಗುವುದು ಬೇಡ ಎಂದು ನಾನೇ ನಮ್ಮ ಮಾವನವರಿಗೆ ಹೇಳುತ್ತೇನೆ ಎಂದವರು ತಿಳಿಸಿದರು.
ಪೌರ ಕಾರ್ಮಿಕರು ಶ್ರಮಜೀವಿಗಳು. ಅವರ ಪರ ನಾವೆಂದೂ ಇದ್ದೇವೆ. ಅವರ ಸಮಸ್ಯೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ಮಾತನಾಡಿ ಪರಿಹರಿಸುವ ಪ್ರಯತ್ನ ಮಾಡುತ್ತೇನೆ. ಅಲ್ಲದೆ ವಿಧಾನಸಭಾ ಕಲಾಪದಲ್ಲಿಯೂ ಈ ವಿಚಾರ ಪ್ರಸ್ತಾಪ ಮಾಡುವುದಾಗಿ ತಿಳಿಸಿದರು.