ಜೈಪುರ,ಜೂ 02 (DaijiworldNews/HR): ಉದಯಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳ ಮೇಲೆ ಕೋರ್ಟ್ ಆವರಣದಲ್ಲಿ ಥಳಿಸಿರುವ ಘಟನೆ ನಡೆದಿದೆ.
ಆರೋಪಿಗಳನ್ನು ಪೊಲೀಸರು ಎನ್ಐಎ ಕೋರ್ಟ್ ಗೆ ಕರೆದುಕೊಂಡಿದ್ದ ಸಂದರ್ಭದಲ್ಲಿ ನೆರೆದಿದ್ದ ಸಾರ್ವಜನಿಕರು ಆರೋಪಿಗಳ ಮೇಲೆ ಮುಗಿಬಿದ್ದು ಥಳಿಸಿದ್ದು, ಪೊಲೀಸರು ಹರಸಾಹಸಪಟ್ಟು ಆರೋಪಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ.
ಇನ್ನು ಬಹುಮಟ್ಟಿಗೆ ವಕೀಲರನ್ನು ಒಳಗೊಂಡ ಗುಂಪು, ಉದಯಪುರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಕಪಾಳಮೋಕ್ಷ ಮಾಡಿ ಥಳಿಸಿದ್ದು, ಆರೋಪಿಗಳ ಬೆಂಗಾವಲು ಪಡೆ ಪೊಲೀಸರು ಅವರನ್ನು ಪೊಲೀಸ್ ವ್ಯಾನ್ ಒಳಗೆ ಕಳಿಸಿದ್ದಾರೆ.