ಮುಂಬೈ, ಜು 02 (DaijiworldNews/DB): 2019ರ ಚುನಾವಣೆಯಲ್ಲಿ ನಮಗೆ ಸಿಎಂ ಸ್ಥಾನ ನೀಡದಕ್ಕಾಗಿ ಬಿಜೆಪಿಯೊಂದಿಗಿನ 25 ವರ್ಷಗಳ ಮೈತ್ರಿಯನ್ನು ಮುರಿದುಕೊಳ್ಳಬೇಕಾಯಿತು ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ನಮಗೆ ನೀಡಿ ಎಂದು ಅವರಲ್ಲಿ ಕೇಳಿಕೊಂಡಿದ್ದೆವು. ಆದರೆ ಬಿಜೆಪಿಯವರು ನೀಡಲಿಲ್ಲ. ಹೀಗಾಗಿ ಬಾಳಾ ಸಾಹೇಬ್ ಠಾಕ್ರೆ ಅವರ ಕಾಲದಿಂದಲೂ ಬಿಜೆಪಿಯೊಂದಿಗೆ ಇದ್ದ ಎರಡೂವರೆ ದಶಕಗಳ ಮೈತ್ರಿಯನ್ನು ಮುರಿದುಕೊಳ್ಳಬೇಕಾಯಿತು. ಅಲ್ಲದೆ ಅವರು ಸಿಎಂ ಸ್ಥಾನ ನೀಡದೇ ಇದ್ದುದರಿಂದ ಎನ್ಸಿಪಿ ಜತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯ ನಮಗೆ ಎದುರಾಗಿತ್ತು ಎಂದರು.
2019ರ ಚುನಾವಣೆಯಲ್ಲಿ ನಮ್ಮ ಬೇಡಿಕೆಗೆ ಅಮಿತ್ ಶಾ ಅವರು ಸ್ಪಂದಿಸಿರುತ್ತಿದ್ದರೆ ನಾವು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುಂದುವರಿಸುತ್ತಿದ್ದೆವು ಎಂದವರು ತಿಳಿಸಿದರು.