ಫಿರೋಜ್ಪುರ, ಜು 02 (DaijiworldNews/DB): ಅರಿವಿಲ್ಲದೇ ಗಡಿ ದಾಟಿ ಬಂದ ಪಾಕಿಸ್ತಾನದ ಮೂರು ವರ್ಷದ ಬಾಲಕನನ್ನು ಗಡಿ ಭದ್ರತಾ ಪಡೆ ಸಿಬಂದಿ ಸುರಕ್ಷಿತವಾಗಿ ಪಾಕಿಸ್ತಾನಿ ರೇಂಜರ್ಗಳಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಬಾಲಕ ಪಂಜಾಬ್ನ ಅಂತಾರಾಷ್ಟ್ರೀಯ ಗಡಿ ದಾಟಿ ಬಂದಿದ್ದ. ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಫಿರೋಜ್ಪುರ ಸೆಕ್ಟರ್ನಲ್ಲಿ ಐಬಿ ಬೇಲಿ ಬಳಿ ಮಗು ಅಳುತ್ತಿರುವುದು ಬಿಎಸ್ಎಫ್ ಯೋಧರ ಗಮನಕ್ಕೆ ಬಂದಿದೆ. ಅಲ್ಲದೆ, ಅರಿವಿಲ್ಲದೆ ಮಗು ಗಡಿ ದಾಟಿ ಬಂದಿರುವುದು ಗೊತ್ತಾಗಿದೆ. ಕೂಡಲೇ ಕಾರ್ಯೋನ್ಮುಖರಾದ ಬಿಎಸ್ಎಫ್ ಪಂಜಾಬ್ ಫ್ರಾಂಟಿಯರ್ ರಾತ್ರಿ 9:45 ರ ಸುಮಾರಿಗೆ ಪಾಕಿಸ್ತಾನ ರೇಂಜರ್ಸ್ಗೆ ತೆರಳಿ ಮಗುವನ್ನು ಪಾಕ್ ರೇಂಜರ್ಸ್ಗೆ ಹಸ್ತಾಂತರಿಸಿದೆ ಎಂದು ಸೇನೆಯ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಸದ್ಭಾವನೆ ಮತ್ತು ಮಾನವೀಯ ನೆಲೆಗಟ್ಟಿನ ಸೂಚಕವಾಗಿ ಈ ಕಾರ್ಯ ನಡೆದಿದೆ.
ಕಳೆದ ವರ್ಷ ಅರಿವಿಲ್ಲದೆ ಪಂಜಾಬ್ನ ಅಂತಾರಾಷ್ಟ್ರೀಯ ಗಡಿ ದಾಟಿ ಭಾರತಕ್ಕೆ ಬಂದಿದ್ದ ಆರು ಮಂದಿ ಪಾಕಿಸ್ತಾನಿ ಯುವಕರನ್ನು ಬಿಎಸೆಎಫ್ ಯೋಧರು ಪಾಕ್ ರೇಂಜರ್ಗಳಿಗೆ ಹಸ್ತಾಂತರಿಸಿದ್ದರು.