ನವದೆಹಲಿ, ಜೂ 02 (DaijiworldNews/HR): ಜಬಲ್ಪುರಕ್ಕೆ ಹೊರಟಿದ್ದ ಸ್ಪೈಸ್ಜೆಟ್ ವಿಮಾನದಲ್ಲಿ ದಿಢೀರ್ ಹೊಗೆ ಕಾಣಿಸಿಕೊಂಡ ಕಾರಣ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.
ದೆಹಲಿಯಿಂದ ಮಧ್ಯಪ್ರದೇಶದ ಜಬಲ್ಪುರಕ್ಕೆ ಹೊರಟಿದ್ದ ಸ್ಪೈಸ್ಜೆಟ್ Q400 ವಿಮಾನ ಸಂಖ್ಯೆ SG-2962 (ದೆಹಲಿ-ಜಬಲ್ಪುರ) ವಿಮಾನದ ಕ್ಯಾಬಿನ್ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ತಕ್ಷಣ ದೆಹಲಿಯಲ್ಲಿ ತುರ್ತು ಭೂಸರ್ಶ ಮಾಡಿದೆ.
ಇನ್ನು ವಿಮಾನವು ಸುಮಾರು 5000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಕ್ಯಾಬಿನ್ನಲ್ಲಿ ಹೊಗೆ ಬರುತ್ತಿರುವುದನ್ನು ವೈಮಾನಿಕ ಸಿಬ್ಬಂದಿ ಗಮನಿಸಿದ್ದು, ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಈ ವಿಮಾನದಲ್ಲಿ 185 ಮಂದಿ ಪ್ರಯಾಣಿಕರಿದ್ದು, ನಾಲ್ವರು ವೈಮಾನಿಕ ಸಿಬ್ಬಂದಿ ಹಾಗೂ ಇಬ್ಬರು ಪೈಲೆಟ್ಗಳು ಇದ್ದರು ಎನ್ನಲಾಗಿದೆ.