ಬೆಂಗಳೂರು, ಜು 02 (DaijiworldNews/MS): ಕೋವಿಡ್ ಸೋಂಕಿಗೆ ನೀಡುವ ಚಿಕಿತ್ಸಾ ದರ ಏರಿಸಲು ಖಾಸಗಿ ಆಸ್ಪತ್ರೆಗಳು ರಾಜ್ಯದ ಆರೋಗ್ಯ ಇಲಾಖೆಯ ಮುಂದೆ ಪ್ರಸ್ತಾಪ ಮುಂದಿರಿಸಿದೆ.
ಕೊರೊನಾ ಚಿಕಿತ್ಸಾ ವೆಚ್ಚವನ್ನು ಹೆಚ್ಚಳ ಮಾತ್ರವಲ್ಲದೆ ಇದರೊಂದಿಗೆ ಇತರೆ ಸುಮಾರು 70 ಕ್ಕೂ ಹೆಚ್ಚು ಚಿಕಿತ್ಸೆಗಳ ದರಗಳ ಏರಿಕೆ ಮಾಡುವಂತೆ ಆರೋಗ್ಯ ಇಲಾಖೆಗೆ ಒತ್ತಾಯಿಸಿವೆ.
ಕೊರೊನಾ ಚಿಕಿತ್ಸೆ ಕೊಡಲು ಔಷಧಿಗಳ ಬೆಲೆ ಹೆಚ್ಚಳ ಸೇರಿದಂತೆ ಇತರ ಖರ್ಚುಗಳು ಹೆಚ್ಚಾಗಿದ್ದು ಹೀಗಾಗಿ ಕೋವಿಡ್ ಚಿಕಿತ್ಸೆ ದರ ಹೆಚ್ಚಳ ಮಾಡಲು ಆರೋಗ್ಯ ಇಲಾಖೆ ಮುಂದೆ ಖಾಸಗಿ ಆಸ್ಪತ್ರೆಗಳು ಬೇಡಿಕೆ ಇಟ್ಟಿದೆ.
ದರ ಪರಿಷ್ಕರಣೆಗೆ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಏರಿಕೆಯ ವಿಚಾರವಾಗಿ ಇಲಾಖೆ ಒಂದು ಸಮಿತಿ ರಚನೆ ಮಾಡಿದ್ದು ತಜ್ಞರ ವರದಿ ಕೈಸೇರಿದ ಬಳಿಕ ಅವರ ಸಲಹೆಯಂತೆ ವೆಚ್ಚ ಮರು ಪರಿಷ್ಕರಣೆಯ ಬಗ್ಗೆ ನಿರ್ಧಾರ ಕೈಗೊಳ್ಳವ ಸಾಧ್ಯತೆ ಇದೆ.