ನವದೆಹಲಿ, ಜು 02 (DaijiworldNews/MS): ವಿಮಾನಯಾನದ ಸಂದರ್ಭ ಆಹಾರ ಬಲು ದುಬಾರಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ . ಆದರೆ ರೈಲು ಪ್ರಯಾಣದ ವೇಳೆ ಆಹಾರ ದುಬಾರಿಯಾದರೇ?. ಹೌದು ಇದಕ್ಕೆ ಪುಷ್ಟಿ ನೀಡುವಂತೆ ರೈಲು ಪ್ರಯಾಣಿಕರೊಬ್ಬರು ಚಹಾವೊಂದಕ್ಕೆ 70 ರೂಪಾಯಿ ಪಾವತಿಸಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇವರು ಹಂಚಿಕೊಂಡ ಬಿಲ್ ಪ್ರಕಾರ ಒಂದು ಚಹಾದ ಬೆಲೆ 70 ರೂಪಾಯಿ.! ಅಂದರೆ 20 ರೂಪಾಯಿಯ ಚಹಾ ಹಾಗೂ ಸೇವಾ ಶುಲ್ಕ 50 ರೂಪಾಯಿ!
ದೆಹಲಿಯಿಂದ ಭೋಪಾಲ್ಗೆ ಜೂನ್ 28ರಂದು ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರ ಜೇಬಿಗೆ ಈ ಬಿಸಿ ತಟ್ಟಿದೆ. ತೆರಿಗೆ ಇನ್ವೈಸ್ಗಳ ಫೋಟೊ ಟ್ವಿಟ್ಟರ್ ಮತ್ತು ರೆಡ್ಡಿಟ್ನಲ್ಲಿ ವೈರಲ್ ಆಗಿದೆ.
ಆದರೆ ರೈಲ್ವೆ ಇಲಾಖೆಯ ಪ್ರಕಾರ, ಪ್ರಯಾಣಿಕರು ತಮ್ಮ ಟಿಕೆಟ್ ಕಾಯ್ದಿರಿಸುವ ವೇಳೆ ಆಹಾರವನ್ನು ಕೂಡಾ ಬುಕ್ಕಿಂಗ್ ಮಾಡದೇ, ಪ್ರಯಾಣದ ವೇಳೆ ಆಹಾರಕ್ಕಾಗಿ ಮನವಿ ಮಾಡಿದರೆ 50 ರೂಪಾಯಿ ಸೇವಾ ಶುಲ್ಕ ವಿಧಿಸಲಾಗುತ್ತದೆ. ಈ ಸಂಬಂಧ 2018ರಲ್ಲೇ ಸುತ್ತೋಲೆ ಹೊರಡಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಆದರೆ ರೈಲ್ವೇ ಪ್ರಕಾರ, ಪ್ರಯಾಣಿಕರು ತಮ್ಮ ಎಕ್ಸ್ಪ್ರೆಸ್ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸುವಾಗ ಯಾವುದೇ ಆಹಾರವನ್ನು ಮುಂಚಿತವಾಗಿ ಆರ್ಡರ್ ಮಾಡದಿದ್ದರೆ, ಪ್ರಯಾಣದ ಸಮಯದಲ್ಲಿ ಏನನ್ನಾದರೂ ಆರ್ಡರ್ ಮಾಡಿದರೆ 50 ರೂಪಾಯಿ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ.
ಭಾರತೀಯ ರೈಲ್ವೇ 2018 ರಲ್ಲಿ ಸುತ್ತೋಲೆ ಹೊರಡಿಸಿದ್ದು, "ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಆಹಾರ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳದ ಪ್ರಯಾಣಿಕರು ಮತ್ತು ಪ್ರಯಾಣದ ವೇಳೆ ಆಹಾರ ಖರೀದಿಸಲು ನಿರ್ಧರಿಸಿದರೆ, ಹೆಚ್ಚುವರಿಯಾಗಿ ಪ್ರತಿ ಊಟಕ್ಕೆ ₹ 50 ಹೆಚ್ಚುವರಿ ಮೊತ್ತವನ್ನು ನೀಡಲಾಗುತ್ತದೆ. ಊಟಕ್ಕೆ ಸೂಚಿಸಲಾದ ಅಡುಗೆ ಶುಲ್ಕಗಳನ್ನು IRCTC ಯ ಆನ್-ಬೋರ್ಡ್ ಮೇಲ್ವಿಚಾರಕರು ವಿಧಿಸುತ್ತಾರೆ." ಎಂದು ಹೇಳಿದೆ