ಮುಂಬೈ, ಜು 02 (DaijiworldNews/MS): ಪಕ್ಷ ವಿರೋಧಿ ಆರೋಪದ ಮೇಲೆ ಶಿವಸೇನಾ ನಾಯಕ ಸ್ಥಾನದಿಂದ , ಶುಕ್ರವಾರ ನೂತನವಾಗಿ ನೇಮಕಗೊಂಡ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಶುಕ್ರವಾರ ತಡರಾತ್ರಿ ಉದ್ಧವ್ ಠಾಕ್ರೆ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ಶಿವಸೇನೆ ಅಧ್ಯಕ್ಷರ ನಂತರ ಶಿವಸೇನೆಯ ಸಂಘಟನೆಯ ನಾಯಕ ಅತ್ಯಂತ ಪ್ರಮುಖವಾಗಿದ್ದು, ಶಿವಸೇನೆಗೆ ಹಕ್ಕು ಸ್ಥಾಪನೆಯ ತೀವ್ರ ಹೋರಾಟದ ಬೆಳವಣಿಗೆಯಲ್ಲಿ ಉದ್ಧವ್ ಠಾಕ್ರೆ ಶಿಂಧೆ ಅವರನ್ನು ನಾಯಕನ ಸ್ಥಾನದಿಂದ ತೆಗೆದುಹಾಕಿದ್ದಾರೆ.
'ನೀವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದೀರಿ ಮತ್ತು ಸ್ವಯಂಪ್ರೇರಣೆಯಿಂದ ಶಿವಸೇನೆಯ ಸದಸ್ಯತ್ವವನ್ನು ತ್ಯಜಿಸಿದ್ದೀರಿ. ಆದ್ದರಿಂದ, ಶಿವಸೇನಾ ಪಕ್ಷದ ಪ್ರಮುಖನಾಗಿ ನನಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ, ನಾನು ನಿಮ್ಮನ್ನು ಶಿವಸೇನೆ ಪಕ್ಷದ ನಾಯಕನ ಸ್ಥಾನದಿಂದ ತೆಗೆದುಹಾಕುತ್ತಿದ್ದೇನೆ' ಎಂದು ಠಾಕ್ರೆ ಅವರು ಶಿಂಧೆಗೆ ನೀಡಿರುವ ನೋಟಿಸ್ನಲ್ಲಿ ತಿಳಿಸಿದ್ದಾರೆ.
ಶಿಂಧೆ ಅವರು ತಾವು ಶಿವಸೇನೆಯ ನಾಯಕ ಮತ್ತು ಠಾಕ್ರೆ ಪಾಳಯವು ಅಲ್ಪಸಂಖ್ಯಾತರೆಂದು ಹೇಳಿಕೊಂಡಿದ್ದರೂ, ಅವರು ತಮ್ಮನ್ನು ಎಂದಿಗೂ ಪಕ್ಷದ ಪ್ರಮುಖ್ (ಪಕ್ಷದ ಮುಖ್ಯಸ್ಥರು) ಎಂದು ಕರೆದುಕೊಂಡಿಲ್ಲ. ಉದ್ಧವ್ ಠಾಕ್ರೆ ತಾಂತ್ರಿಕವಾಗಿ ಇನ್ನೂ ಪಕ್ಷದ ಮುಖ್ಯಸ್ಥರಾಗಿದ್ದಾರೆ.
ಈ ಮಧ್ಯೆ, ಮುಖ್ಯಮಂತ್ರಿ ಏಕನಾಥ ಶಿಂಧೆ ಜತೆಗಿರುವ ಶಿವಸೇನಾದ 39 ಶಾಸಕರು ಮತ್ತು ಬಿಜೆಪಿ ಮೈತ್ರಿ ಸರ್ಕಾರವು ಇದೇ 4ರಂದು (ಸೋಮವಾರ) ವಿಶ್ವಾಸಮತ ಯಾಚಿಸಲಿದೆ