ರಾಜಸ್ಥಾನ, ಜ 01(DaijiworldNews/HR): ನನ್ನ ತಂದೆ ಕನ್ಹಯ್ಯಾ ಲಾಲ್ ಅವರಿಗೆ ಭದ್ರತೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೂ ಕೊಟ್ಟಿರಲಿಲ್ಲ. ಈಗ ನಮಗಾದರೂ ನೀಡಿ ಎಂದು ಟೈಲರ್ ಪುತ್ರ ಯಶ್ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಯಶ್, ನಮ್ಮ ತಂದೆಗೆ ಪ್ರಾಣ ಬೆದರಿಕೆ ಇರುವುದರಿಂದ ಪೊಲೀಸ್ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರೂ ಕೊಟ್ಟಿರಲಿ, ಈಗಲಾದರೂ ನಮ್ಮ ಕುಟುಂಬಕ್ಕೆ ಭದ್ರತೆ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದೇನೆ ಎಂದರು.
ಇನ್ನು ನನ್ನ ತಂದೆಯನ್ನು ಹತ್ಯೆ ಮಾಡಿರುವ ಹಂತಕರನ್ನು ಸುಮ್ಮನೇ ಬಿಡಬಾರದು. ಅವರಿಗೆ ಗಲ್ಲು ಶಿಕ್ಷೆಗಿಂತ ಕಡಿಮೆ ಪ್ರಮಾಣದ ಶಿಕ್ಷೆಯನ್ನಂತೂ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ.