ಮುಂಬೈ,ಜ 01(DaijiworldNews/HR): ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ ಜಾರಿ ನಿರ್ದೇನಾಲಯದ (ಇಡಿ) ವಿಚಾರಣೆಗೆ ಹಾಜರಾಗುವುದಾಗಿ ಶಿವಸೇನಾ ನಾಯಕ ಸಂಜಯ್ ರಾವುತ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಮಧ್ಯಾಹ್ನ 12ಕ್ಕೆ ನಾನು ಇ.ಡಿ ವಿಚಾರಣೆಗೆ ಹಾಜರಾಗಲಿದ್ದು, ನನಗೆ ನೀಡಿರುವ ಸಮನ್ಸ್ ಅನ್ನು ಗೌರವಿಸುತ್ತೇನೆ ಮತ್ತು ಅದರಂತೆ ತನಿಖಾ ಸಂಸ್ಥೆಗಳಿಗೆ ಸಹಕರಿಸುವುದು ನನ್ನ ಕರ್ತವ್ಯವಾಗಿದೆ ಎಂದಿದ್ದಾರೆ.
ಇನ್ನು ಜೂನ್ 28ರಂದು ಇಡಿಯು ರಾವುತ್ಗೆ ಸಮನ್ಸ್ ನೀಡಿದ್ದು, ಅವರ ಪರ ವಕೀಲರು ತನಿಖೆ ಹಾಜರಾಗಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ ಶುಕ್ರವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಹೊಸ ಸಮನ್ಸ್ ನೀಡಲಾಗಿದೆ.