ನೋಯ್ಡಾ, ಜೂ 30 (DaijiworldNews/DB): ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ವೀಡಿಯೋಗೆ ಹತ್ಯೆ ಬೆಂಬಲಿಸಿ ಕಮೆಂಟ್, ಲೈಕ್ ಹಾಗೂ ಶೇರ್ ಮಾಡಿದ್ದ ವ್ಯಕ್ತಿಯೋರ್ವನನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನೋಯ್ಡಾ ಸೆಕ್ಟರ್ 168ರ ಚಪ್ರೌಲಿ ನಿವಾಸಿ ಆಶಿಫ್ ಖಾನ್ ಎಂದು ಗುರುತಿಸಲಾಗಿದೆ. ಈತ ಫೇಸ್ಬುಕ್ನಲ್ಲಿ ಕನ್ಹಯ್ಯ ಲಾಲ್ ಹತ್ಯೆಯ ವೀಡಿಯೋವೊಂದಕ್ಕೆ ಹತ್ಯೆ ಬೆಂಬಲಿಸಿ ಕಮೆಂಟ್, ಲೈಕ್ ಅಲ್ಲದೇ ಶೇರ್ ಮಾಡಿಕೊಂಡಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಈತನ ವಿರುದ್ದ ಐಪಿಸಿ ಸೆಕ್ಷನ್ 505(2) and 295ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದರು. ತತ್ಕ್ಷಣ ಪೊಲೀಸರ ತಂಡ ರಚಿಸಿ ಆರೋಪಿಗಾಗಿ ಬಲೆ ಬೀಸಿದ್ದರು. ಇದೀಗ ಆರೋಪಿ ಪೊಲೀಸ್ ವಶವಾಗಿದ್ದಾನೆ.
ಆತ ವೀಡಿಯೋ ಶೇರ್ ಮಾಡಲು ಬಳಸಿದ್ದ ಮೊಬೈಲ್ ಫೋನ್ನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.