ಮುಂಬೈ, ಜೂ 30 (DaijiworldNews/HR): ಹನುಮಾನ್ ಚಾಲೀಸಾವನ್ನು ಬ್ಯಾನ್ ಮಾಡಲು ಹೊರಟಿದ್ರಲ್ವಾ? ಈಗ ಗೊತ್ತಾಯ್ತಾ ಅದರ ತಾಕತ್ತು. ಹನುಮಂತನನ್ನು ಶಿವನ 12ನೇ ಅವತಾರ ಎಂದು ಹೇಳಲಾಗುತ್ತದೆ. ಶಿವ ಸೇನೆಯೇ ಹನುಮಾನ್ ಚಾಲೀಸಾವನ್ನು ಬ್ಯಾನ್ ಮಾಡಿದರೆ ಅವರನ್ನು ಸ್ವತಃ ಶಿವನೂ ಕಾಪಾಡಲು ಸಾಧ್ಯವಿಲ್ಲ ಎಂದು ಉದ್ಧವ್ ಠಾಕ್ರೆಗೆ ನಟಿ ಕಂಗನಾ ರಣಾವತ್ ಟಾಂಗ್ ನೀಡಿದ್ದಾರೆ.
ನಟಿ ಕಂಗನಾ ರಣಾವತ್ ಅವರ ಕಚೇರಿ 'ಮಣಿಕರ್ಣಿಕಾ' ಕಟ್ಟಡವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೂಚನೆ ಮೇರೆಗೆ ಅಲ್ಲಿನ ಪಾಲಿಕೆ ಕಳೆದ ವರ್ಷ ನೆಲಸಮಗೊಳಿಸಿತ್ತು. ಈ ವೇಳೆ ಕಂಗನಾ ಮಣಿಕರ್ಣಿಕಾ ಕಚೇರಿಯನ್ನು ಕೆಡವಿದ್ದೀರಿ, ಇಂದು ನನ್ನ ಮನೆ ಮುರಿದಿದೆ, ನಾಳೆ ನಿಮ್ಮ ಅಹಂಕಾರವೂ ಮುರಿಯಲಿದೆ ಎಂದು ಟ್ವಿಟರ್ನಲ್ಲಿ ಅಸಮಾಧಾನ ಹೊರಹಾಕಿದ್ದರು.
ಇನ್ನು ಇದೀಗ ಠಾಕ್ರೆ ಅವರು ರಾಜೀನಾಮೆ ನೀಡಿರುವುದರ್ಇಂದ ಅವರ ಹಳೆಯ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.