ಶಿವಮೊಗ್ಗ, ಜೂ 30 (DaijiworldNews/HR): ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಇಂದು ಶಿವಮೊಗ್ಗ ಜಿಲ್ಲೆಯ 18 ಕಡೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ.
ಎನ್ಐಎ ಅಧಿಕಾರಿಗಳು ಶಿವಮೊಗ್ಗಕ್ಕೆ ಬುಧವಾರ ರಾತ್ರಿ ಬಂದಿಳಿದಿದ್ದು, ಇಂದು ಬೆಳಗ್ಗೆ ನಾಲ್ಕು ರಾಜ್ಯಗಳ ಹಿರಿಯ ಅಧಿಕಾರಿಗಳಳು, ಜಿಲ್ಲೆಯ ಅಧಿಕಾರಿಗಳನ್ನೂ ಸೇರಿ ಒಟ್ಟು 90 ಅಧಿಕಾರಿಗಳ ತಂಡವು ದಾಳಿ ಆರಂಭಿಸಿದೆ.
ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ 18 ಕಡೆ ದಾಳಿ ನಡೆಸಲಾಗಿದ್ದು, ಹರ್ಷ ಪ್ರಕರಣದಲ್ಲಿ ಕೇಳಿ ಬಂದ ಆರೋಪಿಗಳ ಕುಟುಂಬದವರು, ಅವರ ಸಂಬಂಧಿಕರ ವಿಚಾರಣೆ ಮಾಡಲಾಗಿದೆ.