ಬೆಂಗಳೂರು, ಜೂ 30 (DaijiworldNews/DB): ರಾಜಸ್ಥಾನದ ಉದಯಪುರದಲ್ಲಿ ಜಿಹಾದಿಗಳಿಂದ ಹತ್ಯೆಗೊಳಗಾದ ಟೈಲರ ಕನ್ಹಯ್ಯ ಲಾಲ್ ಅವರ ಕುಟುಂಬಕ್ಕೆ ಕಳೆದ 24 ಗಂಟೆಯಲ್ಲಿ 1 ಕೋಟಿ ರೂ. ಹಣ ಸಂಗ್ರಹವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಕಣ್ಣೀರು ತಡೆಯಲು ಸಾಧ್ಯವಾಗುತ್ತಿಲ್ಲ. ಹಿಂದೂಗಳೆಲ್ಲರೂ ಕನ್ಹಯ್ಯ ಲಾಲ್ ಕುಟುಂಬದ ಜೊತೆ ನಿಂತಿರುವುದಕ್ಕೆ ಧನ್ಯವಾದಗಳು ಎಂದಿದ್ದಾರೆ.
ದುಷ್ಕರ್ಮಿಗಳು ಕನ್ಹಯ್ಯ ಲಾಲ್ ಅವರನ್ನು ಇರಿಯುತ್ತಿದ್ದ ವೇಳೆ ಕನ್ಹಯ್ಯ ಅವರನ್ನು ಕಾಪಾಡಲು ಹೋಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಈಶ್ವರ ಸಿಂಗ್ ಅವರಿಗೆ 25 ಲಕ್ಷ ರೂ. ನೀಡಲಾಗುವುದು ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ.