ಶ್ರೀನಗರ, ಜೂ 30 (DaijiworldNews/HR): ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಲಷ್ಕರ್ ಎ ತಯ್ಯಬಾ ಸಂಘಟನೆಯ ಉಗ್ರನನ್ನು ಭದ್ರತಾ ಪಡೆ ಬಂಧಿಸಿ, ಅಡಗುತಾಣಗಳನ್ನು ಧ್ವಂಸ ಮಾಡಿದೆ.
ಬಂಧಿತ ಉಗ್ರನನ್ನು ನಡಿಹಾಲ್ ನಿವಾಸಿ ಮೆಹಬೂಬ್ ಉಲ್ ಇನಾಮ್ ಎಂದು ಗುರುತಿಸಲಾಗಿದೆ.
ಇನ್ನು ಉಗ್ರರನ್ನು ಬಂಧಿಸಿರುವ ಭದ್ರತಾ ಪಡೆ ಉಗ್ರರ ಅಡಗುದಾಣಗಳನ್ನು ಧ್ವಂಸ ಮಾಡಿದ್ದು, ಡ್ರೋನ್ನಿಂದ ಚಿತ್ರೀಕರಿಸಿದ ಅಡಗುದಾಣಗಳ ಧ್ವಂಸದ ವಿಡಿಯೊ ವೈರಲ್ ಆಗಿದೆ.
ಬಂಧಿತನಿಂದ 2 ಕೆ,ಜಿಯಷ್ಟು ಸ್ಫೋಟಕ ಸಾಮಗ್ರಿ, ಮೂರು ಎಕೆ ರೈಫಲ್ಸ್, 10 ಮ್ಯಾಗಜಿನ್, ಚೀನಾದ ಗ್ರೆನೇಡ್ ವಶಕ್ಕೆ ಪಡೆದಿದ್ದಾರೆ.