ನವದೆಹಲಿ, ಜೂ 30 (DaijiworldNews/HR): ಭಾರೀ ವಿರೋಧದ ನಡುವೆಯೂ ಅಗ್ನಿಪಥ್ ನೇಮಕಾತಿಗೆ ಬೆಂಬಲ ವ್ಯಕ್ತವಾಗಿದ್ದು, ವಾಯಸೇನೆಗೆ ಸೇರ್ಪಡೆಯಾಗಲು ಆರು ದಿನಗಳಲ್ಲಿ 1.83 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಜೂನ್ 24ರಿಂದ ವಾಯುಸೇನೆಯ ಅಗ್ನಿವೀರರ ನೇಮಕಾತಿಗೆ ನೋಂದಣಿ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಈವರೆಗೂ 1,83,634 ಮಂದಿ ಅರ್ಜಿ ಸಲ್ಲಿಸಿದ್ದಾರೆ.ಜುಲೈ 25ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಇನ್ನು ಈ ಯೋಜನೆಗೆ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿದ್ದು, ಇದರ ನಡುವೆಯೂ ವಾಯುಸೇನೆ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ.