ಯಾದಗಿರಿ, ಜೂ 29 (DaijiworldNews/DB): ವ್ಯಕ್ತಿಯೊಬ್ಬ ಬುದ್ದಿ ಹೇಳಲು ಬಂದ ಪತ್ನಿಯ ಪೋಷಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಯಾದಗಿರಿ ಜಿಲ್ಲೆಯ ಹಣಸಿಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಶರಣಪ್ಪ ಎಂಬಾತನೇ ಪತ್ನಿಯ ಪೋಷಕರಿಗೆ ಬೆಂಕಿ ಹಚ್ಚಿದಾತ. ಪತ್ನಿ ಹುಲಗಮ್ಮ ಮತ್ತು ಪತಿ ಶರಣಪ್ಪ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಹುಲಗಮ್ಮನ ಪೋಷಕರು ಅಳಿಯನಿಗೆ ಬುದ್ದಿ ಹೇಳಲೆಂದು ಬಂದಿದ್ದರು. ಈ ವೇಳೆ ಪತ್ನಿಯ ಪೋಷಕರೊಂದಿಗೂ ಜಗಳವಾಡಿದ ಶರಣಪ್ಪ ರೊಚ್ಚಿಗೆದ್ದು, ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಓರ್ವರು ಸಜೀವದಹನವಾಗಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.