ಬೆಂಗಳೂರು, ಜೂ 29 (DaijiworldNews/HR): ಕಾಂಗ್ರೆಸ್ ಸರ್ಕಾರ ಮತಾಂಧ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಆ ವ್ಯಕ್ತಿಗಳು ರಾಜ್ಯದಲ್ಲಿ ಬೆಳೆಯಲು ಬಿಟ್ಟಿದೆ. ಟೈಲರ್ ಹತ್ಯೆ ಬಗ್ಗೆ ರಾಜಸ್ಥಾನ ಸರ್ಕಾರ ಉತ್ತರ ಕೊಡಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಉದಯಪುರದಲ್ಲಿ ಟೈಲರ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಅವರು, ಮತಾಂಧ ಶಕ್ತಿಗಳು ತಲೆ ಎತ್ತಲು ಬಿಡಬಾರದು. ಇಂತಹ ಪೈಶಾಚಿಕ ಕೃತ್ಯವೆಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.
ಇನ್ನು ಮತಾಂಧ ಶಕ್ತಿಗಳು ಧರ್ಮ ಎಂದರೆ ರಕ್ತಪಾತ, ಹತ್ಯೆ ಎಂದುಕೊಂಡುಬಿಟ್ಟಿದ್ದಾರೆ. ಇಂತಹ ತಿಳುವಳಿಕೆ ಇಡೀ ಜಗತ್ತಿಗೆ ಅಪಾಯಕಾರಿಯಾಗಿದೆ. ಇಂತಹ ಶಕ್ತಿಗಳನ್ನು ನಿಯಂತ್ರಿಸಬೇಕಿದೆ. ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.