ಧಾರವಾಡ, ಜೂ 29 (DaijiworldNews/HR): ನಾವೂ ನೂಪುರ್ ಶರ್ಮಾ ಬೆಂಬಲಿಗ ಎಂಬ ರೀತಿಯಲ್ಲಿ ಅಭಿಯಾನ ಶುರು ಮಾಡುತ್ತೇವೆ. ನಮ್ಮನ್ನೂ ಹೊಡಿತೀರಾ, ಹೊಡಿಯಿರಿ ನೋಡೋಣ. ಎಷ್ಟು ಜನರನ್ನು ಕೊಲ್ಲುವ ತಾಕತ್ ಇದೆ ನೋಡೋಣ ಎಂದು ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಸವಾಲ್ ಹಾಕಿದ್ದಾರೆ.
ಮಾಜಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಬೆಂಬಲಿಸಿದ ಕನ್ನಯ್ಯ ಲಾಲ್ ಎಂಬ ವ್ಯಕ್ತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುತಾಲಿಕ್, ಈ ಘಟನೆ ಖಂಡನೀಯವಾದದ್ದು,ಇಡೀ ದೇಶದಲ್ಲಿ ಲಕ್ಷಾಂತರ ಜನ ನೂಪುರ್ ಶರ್ಮಾ ಬೆಂಬಲಿಸಿದ್ದಾರೆ. ಎಲ್ಲರ ರುಂಡವನ್ನು ತೆಗಿತೀರಾ. ಆ ಇಬ್ಬರು ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಇದು ಭಯೋತ್ಪಾದಕ ಕೃತ್ಯವಾಗಿದ್ದು, ಹಿಂದೂ ಸಮಾಜದ ತಾಳ್ಮೆ ಕೆಟ್ಟಿದೆ. ಹಿಂದೂ ಸಮಾಜವೇ ಕೊಲೆಗೀಡಾಗುತ್ತಿದ್ದು, ಬಿಜೆಪಿಯವರು ಹಿಂದೂಗಳಿಗೆ ವಿಷ ಕೊಟ್ಟು ಬಿಡಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.