ಮುಂಬೈ, ಜೂ 29 (DaijiworldNews/HR): ಬುಧವಾರ ಸಂಜೆ 5 ಗಂಟೆಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸೂಚನೆ ನೀಡಿದ್ದಾರೆ.
ರಾಜ್ಯಪಾಲರನ್ಮು ನಿನ್ನೆ ಭೇಟಿ ಮಾಡಿದ ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸಿಎಂ ಉದ್ಧವ್ ಠಾಕ್ರೆ ಅವರನ್ನು ಕೇಳುವಂತೆ ಕೋರಿ ಪತ್ರವನ್ನು ಸಲ್ಲಿಸಿದ್ದರು.
ಇನ್ನು ದೇವೇಂದ್ರ ಫಡ್ನವೀಸ್ ಪತ್ರ ಸಲ್ಲಿಸಿರುವ ಬೆನ್ನಲ್ಲೇ ನಾಳೆ ಸಂಜೆ 5 ಗಂಟೆಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಠಾಕ್ರೆಗೆ ಸೂಚನೆ ನೀಡಿದ್ದಾರೆ.