ಶಿವಮೊಗ್ಗ, ಜೂ 28 (DaijiworldNews/SM): ಗುತ್ತಿಗೆಯನ್ನು ಪಡೆಯಲು ಯಾರೆಲ್ಲ 40 ಪರ್ಸೆಂಟ್ ಕಮಿಷನ್ ಕೊಟ್ಟಿದ್ದಾರೆ ಅವರು ನೇರವಾಗಿ ವಿಚಾರ ಬಹಿರಂಗಪಡಿಸಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಮಂತ್ರಿ, ಯಾವ ಶಾಸಕ ಪರ್ಸೆಂಟೇಜ್ ಕೇಳಿದ್ರು? ಯಾವ ಗುತ್ತಿಗೆದಾರನಿಗೆ, ಯಾವ ಕಾಮಗಾರಿಗೆ ಕೇಳಿದ್ರು? ಇದರಲ್ಲಿ ಯಾರಾದರೂ ಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ ಹಾಗಾಗಿ ಯಾರಾದ್ರೂ ಕಮಿಷನ್ ಕೊಟ್ಟಿದ್ದರೆ ಅದನ್ನು ಮೊದಲು ಬಹಿರಂಗಪಡಿಸಲಿ ಇಲ್ಲವಾದ್ರೇ ಇದು ಕೇವಲ ರಾಜಕೀಯ ವ್ಯಕ್ತಿಗಳ ಹೇಳಿಕೆಯಂತಾಗುತ್ತದೆ. ಅನ್ಯವ್ಯಕ್ತಿಗಳ ರಾಜಕೀಯ ಕುಮ್ಮಕ್ಕಿನಿಂದ ಪತ್ರ ಬರೆದರಾ ಎಂಬ ಪ್ರಶ್ನೆ ಕೂಡಾ ಜನರಿಗೆ ಕಾಡಲಾರಂಭಿಸುತ್ತದೆ ಎಂದರು.
ಗುತ್ತಿಗೆದಾರರ ಸಂಘದ ಕೆಂಪಣ್ಣ ಬಳಿ ದಾಖಲೆಯಿದೆ ಎಂದು ಬಹಳ ಹಿಂದಿನಿಂದ ಹೇಳ್ತಾ ಇದ್ದಾರೆ. ಈ ಹಿಂದೆ ಸಿಎಂ ಜೊತೆ ಕೂಡಾ ಅವರು ಸಭೆ ನಡೆಸಿದ್ದಾರೆ. ಆಗಲೂ ಕೆಂಪಣ್ಣ ಬಾಯಿ ಬಿಟ್ಟಿಲ್ಲ. ಪ್ರಧಾನಿ ಕಚೇರಿಯಿಂದ ಕರೆ ಬಂದ ಮೇಲೆ ಮತ್ತೆ ವಿಚಾರ ಮುನ್ನೆಲೆಗೆ ಬಂದಿದೆ. ಹಾಗಾಗಿ ಯಾರು ಕಮಿಷನ್ ಕೊಟ್ಟು ಕೆಲಸ ಪಡೆದ ಗುತ್ತಿಗೆದಾರರು ವಿಷಯ ಬಹಿರಂಗ ಪಡಿಸಲಿ ಎಂದರು.