ಮುಂಬೈ, ಜೂ 28 (DaijiworldNews/HR): ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಜುಲೈ 1 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದೆ.
ವಿಚಾರಣೆಗೆ ಹಾಜರಾಗಲು ಸಂಜಯ್ ರಾವತ್ ಮಂಗಳವಾರ ಹೆಚ್ಚಿನ ಸಮಯಾವಕಾಶ ಕೋರಿದ್ದು, ತನಿಖಾ ಸಂಸ್ಥೆ ಕೂಡಾ ಅದೇ ಅವಕಾಶವನ್ನು ನೀಡಿದೆ ಎಂದು ಸಂಜಯ್ ರಾವತ್ ಪರ ವಕೀಲರು ತಿಳಿಸಿದ್ದಾರೆ.
ಇನ್ನು ಸೋಮವಾರ ಮಧ್ಯಾಹ್ನ ತಡವಾಗಿ ಇಡಿ ಸಮನ್ಸ್ ನೀಡಿದ್ದು, ಇಡಿ ಕೆಲವು ದಾಖಲೆಗಳನ್ನು ಕೋರಿರುವುದರಿಂದ ನಾವು ಸಮಯ ಕೋರಿ ಅರ್ಜಿ ಸಲ್ಲಿಸಿದ್ದೇವೆ ಎಂದು ವಕೀಲರು ಹೇಳಿದ್ದಾರೆ.