ಮುಂಬೈ, ಜೂ 28 (DaijiworldNews/HR): ನಿಮಗೆ ಸಂಪರ್ಕದಲ್ಲಿರುವ ಒಬ್ಬ ಬಂಡಾಯ ಶಾಸಕನನ್ನು ಹೆಸರಿಸಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬಂಡಾಯ ನಾಯಕ ಏಕನಾಥ ಶಿಂಧೆ ಸವಾಲು ಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಶಿಂಧೆ, ಉದ್ಧವ್ ಅವರು ತಪ್ಪು ಮಾಹಿತಿ ಹರಡಿ ಜನರನ್ನು ದಾರಿತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಗುವಾಹಟಿಯ ಹೋಟೆಲ್ನಲ್ಲಿರುವ ಬಂಡಾಯ ಶಾಸಕರ ಪೈಕಿ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಹಾಗೂ ಸಂಜಯ್ ರಾವುತ್ ಹೇಳಿದ್ದು,ಇದಕ್ಕೆ ಏಕನಾಥ ಶಿಂಧೆ ತಿರುಗೇಟು ನೀಡಿದ್ದಾರೆ.