ಬಾಗಲಕೋಟೆ, ಜೂ 28 (DaijiworldNews/HR): ಮುಂದಿನ ವಿಧಾನಸಭೆ ಚುನಾವಣೆಯ ವೇಳೆಗೆ ರಾಜ್ಯದ 12 ಸಚಿವರ ಸಿಡಿಗಳು ಬಿಡುಗಡೆಯಾಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30 ಕೋಟಿ ಕೊಟ್ಟು ಮಂಚ ಏರಿದವರ ಸಿಡಿಗಳಿದ್ದಾವೆ. ಆದರೆ ಅವರೆಲ್ಲಾ ಈಗ ಸ್ಟೇ ತಗೊಂಡಿದ್ದಾರೆ. ನಾನೇ ಸಭಾಪತಿಗಳಿಗೆ ಸಿಡಿಯಲ್ಲಿ ಏನಿದೆ ನೋಡಿ ಅಂದಿದ್ದೆ ಎಂದರು.
ಇನ್ನು ವಿಧಾನಸಭೆ ಚುನಾವಣೆಯ ವೇಳೆಗೆ 12 ಸಚಿವರ ಸಿಡಿಗಳು ಹೊರ ಬರಲಿದ್ದು, ಈಗ ಸ್ಟೇ ಇದೆ. ಅವರಲ್ಲಿ ಗೋಪಾಲ ಒಬ್ಬ ಮಾತ್ರ ಹೈಟ್, ವೇಟ್ ಗೆ ಏನೂ ಮಾಡಾಕಾಗಲ್ಲ ಅಂತ ಸ್ಟೇ ತಗೊಂಡಿಲ್ಲ ಎಂದು ಹೇಳಿದ್ದಾರೆ.