ಗುವಾಹಟಿ ಜೂ 28 (DaijiworldNews/MS): ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಇಂದು ಮುಂಬೈಗೆ ಹೋಗುವುದಾಗಿ ಘೋಷಿಸಿದ್ದಾರೆ. ನಾವೆಲ್ಲರೂ "ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುಲು ತಯಾರಾಗಿದ್ದೇವೆ " ಎಂದು ಹೇಳಿದ್ದಾರೆ.
ಬಂಡಾಯ ಶಾಸಕರ ನಾಯಕತ್ವ ವಹಿಸಿರುವ ಅವರು ತಂಗಿರುವ ಗುವಾಹಟಿಯ ಹೋಟೆಲ್ನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, "ಗುವಾಹಟಿಯಲ್ಲಿ ನನ್ನೊಂದಿಗೆ 50 ಜನರಿದ್ದು, ಇವರೆಲ್ಲರೂ ತಮ್ಮ ಸ್ವಂತ ಇಚ್ಛೆಯಿಂದ ಮತ್ತು ಹಿಂದುತ್ವಕ್ಕಾಗಿ ಬಂದಿದ್ದಾರೆ. ನಾವೆಲ್ಲರೂ ಶೀಘ್ರದಲ್ಲೇ ಮುಂಬೈಗೆ ತೆರಳುತ್ತೇವೆ " ಎಂದು ಶಿಂಧೆ ಸುದ್ದಿಗಾರರಿಗೆ ತಿಳಿಸಿದ್ದಾರೆ. .
ಏಕನಾಥ್ ಶಿಂಧೆ ಅವರು ತಮ್ಮ ಕಾರ್ಯಯೋಜನೆಗಾಗಿ ಬಂಡಾಯದ ಮುಂದಿನ ನಡೆಗಾಗಿ ಮುಂಬೈ ಅಥವಾ ದೆಹಲಿಗೆ ತೆರಳಬಹುದು ಎಂದು ವರದಿಯಾಗಿತ್ತು. ಅಲ್ಲದೆ ಅವರು ಕಳೆದ ವಾರವಷ್ಟೇ ಗುಜರಾತ್ನಲ್ಲಿ ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡಿದ್ದರು.