ಮುಂಬೈ, ಜೂ 28 (DaijiworldNews/HR): ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ.
ಸುದ್ದಿ ತಿಳಿಯುತ್ತಿದ್ದಂತೇ ಎರಡು ರಕ್ಷಣಾ ವ್ಯಾನ್ಗಳು ಮತ್ತು ಇತರ ಅಗ್ನಿಶಾಮಕ ದಳದ ಉಪಕರಣಗಳೊಂದಿಗೆ ಹನ್ನೆರಡು ಅಗ್ನಿಶಾಮಕ ಎಂಜಿನ್ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಅವಶೇಷಗಳಡಿ ಸುಮಾರು 20-22 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಸ್ಥಳಕ್ಕೆ ಆದಿತ್ಯ ಠಾಕ್ರೆ ಆಗಮಿಸಿ ಅಗ್ನಿಶಾಮಕ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ತಂಡದಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಅವಲೋಕನ ನಡೆಸಿದ್ದಾರೆ.