ಕುಣಿಗಲ್, ಜೂ 27 (DaijiworldNews/DB): ತಾಲೂಕಿನ ಅಮೃತೂರು ಹೋಬಳಿ ದೊಡ್ಡಕಲ್ಲಹಳ್ಳಿ ಗ್ರಾಮದಲ್ಲಿ ದನ ಮೇಯಿಸುತ್ತಿದ್ದ ಯುವತಿಯನ್ನು ಬಲವಂತವಾಗಿ ಎಳೆದೊಯ್ದು ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಆರೋಪಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ದೊಡ್ಡಕಲ್ಲಹಳ್ಳಿ ಗ್ರಾಮದ ರಾಮಕೃಷ್ಣಯ್ಯ (63) ಬಂಧಿತ ಆರೋಪಿ. ಸಂತ್ರಸ್ತ ಯುವತಿ ತನನ ಗ್ರಾಮದ ಹೊರ ವಲಯದ ಬಯಲಿನಲ್ಲಿ ಎಂದಿನಂತೆ ದನ ಮೇಯಿಸುವ ಕೆಲಸದಲ್ಲಿ ನಿರತಳಾಗಿದ್ದಳು. ಈ ವೇಳೆ ಯುವತಿಯಿದ್ದಲ್ಲಿ ಬಂದ ಆರೋಪಿ ಆಕೆಯ ಬಾಯಿಗೆ ಬಟ್ಟೆ ತುರುಕಿದ್ದಾನೆ. ಬಳಿಕ ಹೆಗಲ ಮೇಲೆ ಆಕೆಯನ್ನು ಹೊತ್ತೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದಾನೆ. ಯುವತಿ ಘಟನೆ ಕುರಿತಂತೆ ಹುಲಿಯೂರುದುರ್ಗ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂ ಪೊಲೀಸರು ಆರೋಪಿ ರಾಮಕೃಷ್ಣಯ್ಯನನ್ನು ಬಂಧಿಸಿದ್ದಾರೆ.
ಈ ಹಿಂದೆ 2016 ರಲ್ಲಿಇದೇ ರಾಮಕೃಷ್ಣಯ್ಯನ ಮೇಲೆ ಅತ್ಯಾಚಾರ ಯತ್ನ ಪ್ರಕರಣ ಹುಲಿಯೂರು ದುರ್ಗ ಠಾಣೆಯಲ್ಲಿ ದಾಖಲಾಗಿತ್ತು. ಮಹಿಳೆಯೋರ್ವರು ದೂರು ದಾಖಲಿಸಿದ್ದರು. ಇದೀಗ ಆತನ ಮೇಲೆ ಎರಡನೇ ಪ್ರಕರಣ ದಾಖಲಾಗಿದೆ.