ಬೆಂಗಳೂರು, ಜೂ 26 (DaijiworldNews/HR): ಸಂವಿಧಾನದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂದು ಉಲ್ಲೇಖವಿದೆ. ಆದರೆ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಒಂದೇ ದಿನದಲ್ಲಿ ಮೇಲ್ವರ್ಗದವರಿಗೆ ಶೆ.10ರಷ್ಟು ಮೀಸಲಾತಿ ಮೀಸಲಾತಿ ಕೊಟ್ರು. ಆದ್ರೆ, ಇದನ್ನ ಯಾರೂ ಪ್ರಶ್ನಿಸಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು ಹಿಂದುಳಿದ ವರ್ಗದವರು, ಎಸ್ಸಿ,ಎಸ್ಟಿಯವರಿಗೆ ತಿಳುವಳಿಕೆ ಕಡಿಮೆ. ಇನ್ನು ಗುಲಾಮಗಿರಿ ಮನಸ್ಥಿತಿಯಿದೆ, ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ ಎಂದರು.
ಇನ್ನು ಮಂಡಲ್ ಆಯೋಗ ರಚಿಸಿದಾಗ ಒಬಿಸಿಗೆ ಶೇ.27ರಷ್ಟು ಮೀಸಲಾತಿ ಸಿಕ್ಕಿದ್ದಕ್ಕೆ ಸಂಭ್ರಮಿಸಬೇಕಾಗಿದ್ದವರೇ ವಿರೋಧಿಸಿದ್ದರು. ಹಿಂದುಳಿದ ವರ್ಗದವರು, ಎಸ್ಸಿ, ಎಸ್ಟಿಯವರೇ ವಿರೋಧಿಸಿದ್ರು. ಹಿಂದುಳಿದ ವರ್ಗದವರು, ಎಸ್ಸಿ,ಎಸ್ಟಿಯವರಿಗೆ ತಿಳುವಳಿಕೆ ಕಡಿಮೆ. ಇನ್ನು ಗುಲಾಮಗಿರಿ ಮನಸ್ಥಿತಿಯಿದೆ, ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ ಎಂದಿದ್ದಾರೆ.