ಶಿವಮೊಗ್ಗ, ಜೂ 26 (DaijiworldNews/HR): ಮಹಾರಾಷ್ಟ್ರದಲ್ಲಿ ಅಪರೇಶನ್ ನಡೆಯುತ್ತಿರುವ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾತಾನಾಡಿದ ಅವರು, ಕರ್ನಾಟಕದಲ್ಲಿ ಶಾಂತಿಪ್ರಿಯರು. ನಾವು ಯಾವುದೇ ಗಲಭೆಗಳಿಗೆ ಆಸ್ಪದ ಕೊಡಲಿಲ್ಲ. ಸರ್ಕಾರ ಮಾಡಲೇಬೇಕು ಎಂಬ ಏಳೆಂಟು ತಿಂಗಳ ಶ್ರಮದಿಂದ ಯಶಸ್ಸು ಕಂಡಿದ್ದರು. ಇಲ್ಲಿ ಕೂಡ ಸರ್ಕಾರ ಬೀಳಿಸಲು ಒಂದೂವರೆ ವರ್ಷದಿಂದ ಪ್ರಯತ್ನ ಮಾಡಿದ್ದರು. ಈಗ ಯಶಸ್ಸು ಕಂಡಿದ್ದಾರೆ. ಎಲ್ಲಿಗೆ ಹೋಗುತ್ತೇ ನೋಡೋಣ ಎಂದರು.
ಇನ್ನು ಶಿವಸೇನೆಯವರು ಬಂಡಾಯ ಹೋಗಿರುವ ಶಾಸಕರ ಕಛೇರಿ ಧ್ವಂಸ, ಗಲಭೆ ಆರಂಭವಾಗಿದೆ. ದೇಶದಲ್ಲಿ ಒಂದು ಕಡೆ ಬಿಜೆಪಿ ನಾಯಕರು ಉಪದೇಶ ಮಾಡುತ್ತಾರೆ. ಚುನಾಯಿತ ಸರ್ಕಾರ ಅಸ್ಥಿರಗೊಳಿಸಿ, ಅಧಿಕಾರ ಹಿಡಿಯುವ ತೀರ್ಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.