ಚಾಮರಾಜನಗರ, ಜೂ 26 (DaijiworldNews/HR): ರಸ್ತೆ ಮೇಲೆ ವಾಹನಗಳನ್ನು ಅಡ್ಡಗಟ್ಟಿ ಕಾಡಾನೆಗಳು ದಾಳಿ ಮಾಡಲು ಮುಂದಾಗಿರುವ ಘಟನೆ ತಮಿಳುನಾಡು ಡಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ನಡೆದಿದೆ.
ಹೆದ್ದಾರಿಗೆ ಬಂದ ಆನೆಗಳು ತಮ್ಮ ದಾರಿಗೆ ಅಡ್ಡ ಬಂದಿವೆದ್ದು, ಕೆಲವು ವಾಹನಗಳನ್ನು ಜಖಂಗೊಳಿಸಿವೆ.
ಇನ್ನು ಆನೆಗಳು ಬರುತ್ತಿದ್ದರೂ ಭಯವಿಲ್ಲದೆ ಕಾರೊಂದು ಚಲಿಸಿದ್ದರಿಂದ ಅಡ್ಡಗಟ್ಟಿದ ಆನೆಗಳು ಆತಂಕಗೊಂಡು ಕಾರಿನತ್ತ ಧಾವಿಸಿ ಬಂದಿದ್ದು, ತಕ್ಷಣವೇ ಕಾರಿನಲ್ಲಿದ್ದ ಯುವಕ ಕಾರನ್ನು ಬಿಟ್ಟು ಓಡಿಬಂದು ತನ್ನ ಪ್ರಾಣ ರಕ್ಷಿಸಿಕೊಂಡಿದ್ದಾನೆ.