ಬೆಳಗಾವಿ, ಜೂ 26 (DaijiworldNews/DB): ಬೆಳಗಾವಿ ತಾಲೂಕಿನ ಕಳ್ಯಾಳ್ ಬಳಿ ಅಪಘಾತದಲ್ಲಿ ಮೃತಪಟ್ಟ ಏಳು ಮಣದಿಯ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಲಾ 7 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
7 ಲಕ್ಷ ರೂ.ಗಳ ಪೈಕಿ ತಲಾ 5 ಲಕ್ಷ ರೂ.ಗಳನ್ನು ಸರ್ಕಾರದಿಂದ ನೀಡಲಾಗುವುದು. ತಲಾ 2 ಲಕ್ಷ ರೂ.ಗಳನ್ನು ಜಿಲ್ಲಾಡಳಿತದಿಂದ ನೀಡಲು ಸೂಚಿಸಲಾಗಿದೆ ಎಂದವರು ಮಾಧ್ಯಮ್ಗಳಿಗೆ ತಿಳಿಸಿದ್ದಾರೆ.
ದುಡಿಯುವ ಜನರು ಸಾವನ್ನಪ್ಪಿರುವುದು ಆಘಾತಕಾರಿಯಾಗಿದೆ. ಮನೆಯ ಆಧಾರಸ್ಥಂಭಗಳನ್ನೇ ಅವರ ಕುಟುಂಬದವರು ಕಳೆದುಕೊಂಡಂತಾಗಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ಚೇತರಿಸಿಕೊಳ್ಳುವವರೆಗೆ ಚಿಕಿತ್ಸೆ ನೀಡಲು ಸೂಚನೆ ನೀಡಲಾಗುವುದು ಎಂದವರು ತಿಳಿಸಿದರು.