ಮುಂಬೈ, ಜೂ 26 (DaijiworldNews/DB): ಡೆಹ್ರಾಡೂನ್ನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನವೊಂದರಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಕೈಕೊಟ್ಟ ಕಾರಣ ಮೂವರು ಪ್ರಯಾಣಿಕರು ಮೂರ್ಛೆ ಹೋದ ಘಟನೆ ಇತ್ತೀಚೆಗೆ ನಡೆದಿದೆ.
ಡೆಹ್ರಾಡೂನ್ನಿಂದ ಮುಂಬೈಗೆ ತೆರಳುತ್ತಿದ್ದ G8 2316 ವಿಮಾನದಲ್ಲಿ ಎಸಿ ವ್ಯವಸ್ಥೆ ಕೈಕೊಟ್ಟಿತ್ತು. ಇದರಿಂದ ಮೂವರು ಪ್ರಯಾಣಿಕರು ಮೂರ್ಛೆ ತಪ್ಪಿ ಬಿದ್ದಿದ್ದಾರೆ. ವಿಮಾನದಲ್ಲಿದ್ದ ಕ್ಯಾನ್ಸರ್ ರೋಗಿಯೊಬ್ಬರು ಉಸಿರಾಟದ ಸಮಸ್ಯೆಯಿಂದ ನರಳಿದ್ದಾರೆ. ಅನಾರೋಗ್ಯಕ್ಕೊಳಗಾದವರಿಗೆ ಚಿಕಿತ್ಸೆ ನೀಡಲು ಪ್ರಥಮ ಚಿಕತ್ಸಾ ಕಿಟ್ ಕೂಡಾ ವಿಮಾನದಲ್ಲಿ ಇರಲಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.
ಈ ಕುರಿತು ರೋಶ್ನಿ ವಾಲಿಯಾ ಎಂಬ ಪ್ರಯಾಣಿಕರೊಬ್ಬರು ವೀಡಿಯೋ ಹಂಚಿಕೊಂಡಿದ್ದು, ಪ್ರಯಾಣಿಕರು ಎಸಿವೆಂಟ್ಗಳನ್ನು ಪರಿಶೀಲನೆ ಮಾಡುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಅಲ್ಲದೆ 5.30ಕ್ಕೆ ಟೇಕಾಫ್ ಆದ ವಿಮಾನದಲ್ಲಿ ಆರು ಎಸಿಗಳು ಕಾರ್ಯನಿರ್ವಹಿಸುತ್ತರಲಿಲ್ಲ. ಶಾಖ ತಡೆಯಲಾಗದೆ ಮೂವರು ಮೂರ್ಛೆ ಕಳೆದುಕೊಂಡಿದ್ದಾರೆ.
ವಿಮಾನದ ಕೂಲಿಂಗ್ ಕೈಕೊಟ್ಟಿದೆ. ಇದರಿಂದಾಗಿ ಪ್ರಯಾಣಿಕರು ಹೈರಾಣಾಗಿದ್ದಾರೆ. ಈ ವೇಳೆ ಮೂವರು ಪ್ರಯಾಣಿಕರು ಮೂರ್ಛೆ ಹೋಗಿದ್ದು, ಕ್ಯಾನ್ಸರ್ ರೋಗಿಯೊಬ್ಬರಿಗೆ ಉಸಿರಾಟದ ಸಮಸ್ಯೆಯುಂಟಾಗಿದೆ. ಈ ವೇಳೆ ಚಿಕಿತ್ಸೆ ನೀಡಲು ಪ್ರಥಮ ಚಿಕಿತ್ಸಾ ಕಿಟ್ ಕೂಡ ಇರಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. 12,000 ರೂಪಾಯಿ ಪಾವತಿಸಿ ವಿಮಾನದ ಟಿಕೆಟ್ ಪಡೆದುಕೊಂಡಿದ್ದೇನೆ ಎಂಬುದಾಗಿ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ವೀಡಿಯೋದಲ್ಲಿದೆ.