ನವದೆಹಲಿ, ಜೂ 26 (DaijiworldNews/HR): ಇಂದು ದೇಶವು ಲಸಿಕೆಯ ಸಮಗ್ರ ರಕ್ಷಣಾತ್ಮಕ ಹೊದಿಕೆಯನ್ನು ಹೊಂದಿದ್ದು, ನಾವು ಸುಮಾರು 200 ಕೋಟಿ ಲಸಿಕೆ ಪ್ರಮಾಣವನ್ನು ತಲುಪಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಅವರು, ನಾವು ಕೊರೊನಾ ವಿರುದ್ಧ ಮುನ್ನೆಚ್ಚರಿಕೆ ವಹಿಸಬೇಕು. ನಾವು ಸುಮಾರು 200 ಕೋಟಿ ಲಸಿಕೆ ಪ್ರಮಾಣವನ್ನು ತಲುಪಿದ್ದು, ದೇಶದಲ್ಲಿ ಕ್ಷಿಪ್ರ ಮುನ್ನೆಚ್ಚರಿಕೆ ಪ್ರಮಾಣವನ್ನು ಸಹ ಹೇರಲಾಗುತ್ತಿದೆ ಎಂದರು.
ನಮ್ಮ ದೇಶದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ದೊಡ್ಡ ಸಾಧನೆಗಳನ್ನು ಸಾಧಿಸಲಾಗಿದ್ದು, ಖಾಸಗಿ ವಲಯಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಉತ್ತೇಜಿಸುವ ಏಜೆನ್ಸಿ ಇನ್-ಸ್ಪೇಸ್ ಎಂಬ ಏಜೆನ್ಸಿಯನ್ನು ರಚಿಸುವುದು ಈ ಸಾಧನೆಗಳಲ್ಲಿ ಒಂದಾಗಿದೆ ಎಂದಿದ್ದಾರೆ.
ಇನ್ನು ಭಾರತೀಯ ಆಟಗಾರರ ಪ್ರಾಬಲ್ಯ ಹೆಚ್ಚುತ್ತಿದ್ದು, ಭಾರತೀಯ ಕ್ರೀಡೆಗೂ ಹೊಸ ಗುರುತು ಸಿಗುತ್ತಿದೆ. ಈ ಬಾರಿ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಗಟ್ಕಾ, ತಂಗ್ ತಾ, ಯೋಗಾಸನ, ಕಲರಿಪಯಟ್ಟು ಮತ್ತು ಮಲ್ಲಕಂಬ ಸೇರಿದಂತೆ ಐದು ಸ್ಥಳೀಯ ಕ್ರೀಡೆಗಳನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ.