ಕುಣಿಗಲ್, ಜೂ 26 (DaijiworldNews/DB): ಸಾಫ್ಟ್ವೇರ್ ಎಂಜಿನಿಯರ್ವೊಬ್ಬ ಬೈಕ್ನಲ್ಲಿ ಜಾಲಿರೈಡ್ ಹೋಗಿ ಬ್ರಿಡ್ಜ್ನಿಂದ ಬಿದ್ದು ಮೃತಪಟ್ಟ ಘಟನೆ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಗವಿಮಠ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ಬೆಂಗಳೂರಿನ ಬನಶಂಕರಿ ಎರಡನೇ ಹಂತದ ನಿವಾಸಿ ಸೂರಜ್ (27) ಮೃತ ಯುವಕ. ಬೆಂಗಳೂರಿನ ಇನ್ಫೋಸಿಸ್ ಕಚೇರಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಸೂರಜ್ ಭಾನುವಾರ ರಜೆ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ತಮ್ಮ ಡುಕಾಟಿ ಬೈಕಿನಲ್ಲಿ ಜಾಲಿ ರೈಡ್ ಹೊರಟಿದ್ದರು. ಮುಂಜಾನೆ ಸುಮಾರು ಆರು ಗಂಟೆ ವೇಳೆಗೆ ಹೊರಟಿದ್ದ ಅವರು ಎಡಿಯೂರು ಬಳಿಯ ಧ್ರುವತಾರೆ ಹೊಟೇಲ್ಗೆ ಉಪಾಹಾರ ಸೇವಿಸಲೆಂದು ತೆರಳುವಾಗ ಗವಿಮಠ ಬಳಿ ಬ್ರಿಡ್ಜ್ನಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.